ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆಧಿನದಲ್ಲಿರುವ ವ್ಯಾಕ್ಸೀನ್ ಡಿಪೋ ಮೈದಾನದಲ್ಲಿ ಮರಾಠಿ ಮಹಾ ಮೇಳಾವ್ ನಡೆಸಲು ಅನುಮತಿ ನೀಡಲು ಪಾಲಿಕೆ ಆಯುಕ್ತ ಶಶಿಧರ ಕುರೇರ ನಕಾರ ವ್ಯೆಕ್ತ ಪಡಿಸಿದ ಪರಿಣಾಮ ಮೇಳಾವ್ ವೇದಿಕೆಯನ್ನು ಮೈದಾನ ಪಕ್ಕದ ರಸ್ತೆಯಲ್ಲಿ ಹಾಕಲಾಗಿದೆ
ಕೆಲ ವರ್ಷಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಾಲಿಕೆಯ ಆಧೀನದಲ್ಲಿರುವ ಮೈದಾನಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು ಎನ್ನುವ ಠರಾವ್ ಪಾಲಿಕೆಯಲ್ಲಿ ಇದೇ ಎಂಈಎಸ್ ನಾಯಕರು ಪಾಸ್ ಮಾಡಿದ್ದರು ಎಂಈಎಸ್ ಪಾಸ್ ಮಾಡಿದ ಠರಾವ್ ಈಗ ಅವರಿಗೆ ಮುಳುವಾಗಿದ್ದು ಎಂಈಎಸ್ ಹೋರಾಟ ಈಗ ಬೀದಿಗೆ ಬಂದಂತಾಗಿದೆ
ವ್ಯಾಕ್ಸೀನ್ ಡಿಪೋನ ಮೈದಾನದಲ್ಲಿ ಮರಾಠಿ ಮೇಳಾವ್ ನಡೆಸಲು ಅನುಮತಿ ನೀಡುವಂತೆ ಪಾಲಿಕೆ ಆಯುಕ್ತರ ಮೇಲೆ ಮೇಯರ್ ಸೇರಿದಂತೆ ಎಂಈಎಸ್ ಶಾಸಕರು ಒತ್ತಡ ಹೇರಿದ್ದರು ಇದಕ್ಕೆ ಒಪ್ಪದ ಪಾಲಿಕೆ ಆಯುಕ್ತರು ಎಂಈಎಸ್ ನಾಯಕರ ಮನವಿಯನ್ನು ರಿಜೆಕ್ಟ್ ಮಾಡಿರುವ ಶಶಿಧರ ಕುರೇರ ಕನ್ನಡದ ಹಿತಾಸಕ್ತಿ ಕಾಪಾಡುವಲ್ಲಿ ಸಫಲರಾಗಿದ್ದಾರೆ
ವ್ಯಾಕ್ಸೀನ್ ಡಿಪೋ ಮೈದಾನದಲ್ಲಿ ವೇದಿಕೆ ನಿರ್ಮಿಸಿ ಪುಂಡಾಟಿಕೆ ಪ್ರದರ್ಶನ ಮಾಡುತ್ತಿದ್ದ ನಾಡವಿರೋಧಿಗಳಿಗೆ ಈಗ ಹಾದಿ ಬೀದಿಯೇ ಗತಿಯಾಗಿದೆ
ಮರಾಠಿ ಮಹಾ ಮೇಳಾವ್ ಗೆ ನಿರಸ ಪ್ರತಿಕ್ರಿಯೆ ವ್ಯೆಕ್ತವಾಗಿದ್ದು ವೇದಕೆಯ ಬದಿಗೆ ಕೆಲವೇ ಕೆಲವು ನಾಯಕರು ಮಾತ್ರ ಆಗಮಿಸಿದ್ದು ಜನ ಮಾತ್ರ ಕಾಣುತ್ತಿಲ್ಲ
ಮೈದಾನ ದುಷ್ಟರ ಕೂಪದಿಂದ ಮುಕ್ತಿಯಾಗಿದ್ದು ಮೈದಾನದ ಪಕ್ಕದ ರಸ್ತೆಯಲ್ಲಿ ಪೋಲೀಸರು ಮಾದ್ಯಮ ನ ಪ್ರತಿನಿಧಿಗಳು ಕಾಣಿಸುತ್ತಿದ್ದು ಮೇಳಾವ್ ಹನ್ನೆರಡು ಘಂಟೆಗೆ ತಡವಾಗಿ ಆರಂಭವಾಗಲಿದ್ದು ಮೇಳಾವ್ ಗೆ ಜನ ಸೇರಿಸಲು ಎಂಈಎಸ್ ನಾಯಕರು ಪರದಾಡುತ್ತಿದ್ದಾರೆ