Breaking News
Home / Breaking News / ಮಹಾರಾಷ್ರದ ಎಂಈಎಸ್ ಚೇಲಾಗಳಿಗೆ ಲಗಾಮು ಹಾಕಿದ ಡಿಸಿ ಜಿಯಾವುಲ್ಲಾ

ಮಹಾರಾಷ್ರದ ಎಂಈಎಸ್ ಚೇಲಾಗಳಿಗೆ ಲಗಾಮು ಹಾಕಿದ ಡಿಸಿ ಜಿಯಾವುಲ್ಲಾ

 

ಬೆಳಗಾವಿ- ನಾಡದ್ರೋಹಿಗಳ ವಿರುದ್ಧ ಬೆಳಗಾವಿ ಡಿಸಿ ಜಿಯಾವುಲ್ಲಾರಿಂದ ದಿಟ್ಟಕ್ರಮ ಕೈಗೊಂಡಿದ್ದಾರೆ ಮಹಾರಾಷ್ಟ್ರ ಮುಖಂಡರಿಗೆ ಗಡಿ ಜಿಲ್ಲೆ ಬೆಳಗಾವಿ ಪ್ರವೇಶ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಆದೇಶ ಹೊರಡಿಸಿದ್ದಾರೆ

ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ ಮೇಳಾವಾ ಆಯೋಜನೆ ಮಾಡಿತ್ತು ಎಂಇಎಸ ಪುಂಡರಿಂದ ಮಹಾರಾಷ್ಟ್ರ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು ಇಂದು ನಡೆಯಲಿದ್ದ ಮೇಳಾವ್ ದಲ್ಲಿಹಾರಾಷ್ಟ್ರದ ನಾಯಕರು ಭಾಗವಹಿಸಲಿದ್ದರು

ಮೇಳಾವಾಗೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ, ವಿಪಕ್ಷ ನಾಯಕ ಧನಂಜಯ ಮುಂಡೆ ಸೇರಿಗೆ ಆಗಮಿಸುವವರಿದ್ದರು.

ನಾಡದ್ರೋಹಿ ಕುತಂತ್ರಕ್ಕೆ ಡಿಸಿ ಜಿಯಾವುಲ್ಲಾ ಬ್ರೇಕ್ ಹಾಕಿದ್ದು ನವಂಬರ ೧೨ರ ರಾತ್ರಿ ೧೦ ಗಂಟೆಯಿಂದ ೧೪ರ ರಾತ್ರಿ ೧೧.೫೫ರ ವರೆಗೂ ಮಹಾ ನಾಯಕರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಲಾಗಿದೆ

ಮಹಾರಾಷ್ಟ್ರ ಯಾವುದೇ ಜನಪ್ರತಿನಿಧಿಗಳು, ಎಂಇಎಸ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ನಿಷೇಧ ಹೇರಿಕೆ ಮಾಡಲಾಗಿದೆ ಮಹಾ ನಾಯಕರಿಂದ ಕರ್ನಾಟಕ ರಾಜ್ಯ, ಕನ್ನಡ ಭಾಷೆ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುವ ಹಿನ್ನೆಲೆ ಈ ನಿರ್ಬಂಧ ಹೇರಲಾಗಿದೆ ಮಹಾ ನಾಯಕರಿಗೆ ಬೆಳಗಾವಿ ಜಿಲ್ಲೆಯ ಗಡಿ ಪ್ರದೇಶದೊಳಗೆ ಪ್ರವೇಶಿಸದಂತೆ ನಿರ್ಬಂಧ ಮಾಡಲಾಗಿದೆ ಸಿಆರಪಿಸಿ 1973 ಕಲಂ 144(3) ಅನ್ವಯ ನಿರ್ಬಂಧ ಹೇರಲಾಗಿದೆ

Check Also

ಬಾಸ್ ಬಂದು ಹೋದ ಮೇಲೆ ಅಜ್ಜಿಯ ಮನೆಗೆ ಬಂತು ಗ್ಯಾಸ್…!!

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್‌, ಗ್ಯಾಸ್‌ ನೀಡಿದ್ದಾರೆ. …

Leave a Reply

Your email address will not be published. Required fields are marked *