ಬೆಳಗಾವಿ: ಕರ್ನಾಟಕ ಸರ್ಕಾರ ಹಾಗು ಕರ್ನಾಟಕದ ಪೋಲೀಸರು ಗಡಿ ಭಾಗದ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಕೂಡಲೇ ಮದ್ಯಸ್ಥಿಕೆ ವಹಿಸುವಂತೆ ಎಂಈಎಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಡಿ ವಿವಾದವನ್ನು ಪ್ರಧಾನಿ ಅಂಗಳಕ್ಕೆ ಕೊಂಡಯ್ಯುವ ಪ್ರಯತ್ನಕ್ಕೆ ಕೈ ಹಾಕಿದೆ
ದೀಪಕ ದಳವಿ ಮಾಲೋಜಿರಾವ ಅಷ್ಟೇಕರ ಸೇರಿದಂತೆ ಇತರ ನಾಯಕರು ಜಂಟಿಯಾಗಿ ಪತ್ರ ಬರೆದಿದ್ದು ಪತ್ರದಲ್ಲಿ ಯಾವ ಯಾವ ಅಂಶಗಳಿವೆ ನೋಡೋಣ ಬನ್ನಿ
ರಾಜ್ಯ ಸರ್ಕಾರ ಹಾಗೂ ರಾಜ್ಯದ ಪೊಲೀಸರ ವಿರುದ್ದ ಪ್ರಧಾನ ಮಂತ್ರಿಗಳಿಗೆ ಪತ್ರ.
* ಬೆಳಗಾವಿ, ಕಾರವಾರ ಹಾಗೂ ಬೀದರ್ ಜಿಲ್ಲೆಗಳ ಮರಾಠಿ ಭಾಷೆ, ಸಾಂಸ್ಕೃತಿಯ ೨೫ ಲಕ್ಷ ಜನರಿದ್ದ ನಮ್ಮನ್ನ ೧೯೫೬ ರಿಂದ ಬೇರೆ ಭಾಷೆ, ಸಂಸ್ಕೃತಿ ಇರುವ ಕರ್ನಾಟಕಕ್ಕೆ ಸೇರಿಸಿ ನಮಗೆ ಅನ್ಯಾಯ ಮಾಡಲಾಗಿದೆ.
* ಈ ಅನ್ಯಾಯ ವಿರೋಧಿಸಿ ಕಳೆದ ೬೦ ವರ್ಷಗಳಿಂದ ಎಂಇಎಸ್ ಹೆಸರಿನ ಸಂಘಟನೆ ಮಾಡಿ ನವೆಂಬರ್ ೧ ರಂದು ಕರಾಳ ದಿನ ಆಚರಿಸುತ್ತ ಬಂದಿದ್ದೇವೆ. ಆದ್ರೆ.
* ಕರ್ನಾಟಕ ಸರ್ಕಾರ, ಹಾಗೂ ಪೊಲೀಸರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮ ಯುವಕರ ಮೇಲೆ ಲಾಠಿ ಚಾರ್ಚ್ ಮಾಡಿದ್ದಾರೆ. ಮಹಿಳೆಯರು, ವೃದ್ದರಿಗೆ ಹಿಂಸೆ ನೀಡಿದ್ದಾರೆ. ಅಲ್ಲದೇ ಕರಾಳ ದಿನದಲ್ಲಿ ಭಾಗವಹಿಸಿದ ಮೇಯರ್, ಡೆಪ್ಯುಟಿ ಮೇಯರ್ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ ಈ ಹಿಂದೆಯೂ ಈ ರೀತಿ ಕ್ರಮ ಕೈಗೊಂಡು ಸರ್ವಾಧಿಕಾರಿ ಧೋರಣೆ ತೋರುತ್ತಿದೆ.
* ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಇದ್ದಾಗ ಗಡಿ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಎರಡು ರಾಜ್ಯದ ಸಿಎಂ ಗಳನ್ನ ಮಾತುಕತೆಗೆ ಆಹ್ವಾನಿಸಿದ್ದರು. ಆಗ ಕರ್ನಾಟಕ ಸಿಎಂ ಹೇಳದೆ ದೆಹಲಿಯಿಂದ ಕಾಲ್ಕಿತ್ತಿದ್ದರು.
* ಕೂಡಲೇ ತಾವು ಮಧ್ಯಪ್ರವೇಶ ಮಾಡಿ ನಮಗೆ ಅನ್ಯಾಯವಾಗುತ್ತಿರೊದನ್ನ ತಡೆದು, ನಮಗೆ ಕಿರುಕುಳ ನೀಡದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಸಿಸುವಂತೆ ನಾಡದ್ರೋಹಿಗಳಿಂದ ಪ್ರಧಾನಿಗೆ ಪತ್ರ.
* ಇದೇ ೧೩ ರಂದು ಪ್ರಧಾನಿ ನರೇಂದ್ರ ಮೊದಿ ಬೆಳಗಾವಿಗೆ ಆಗಮಿಸುತ್ತಿದ್ದು ಎಂಇಎಸ್ ನ ಈ ಪತ್ರ ಮಹತ್ವ ಪಡೆದಿದೆ.