ಬೆಳಗಾವಿ: ಎಂಇಎಸ್ ಆಯೋಜಿಸಿರುವ ಬೃಹತ್ ಪ್ರತಿಭಟನಾ ರ್ಯಾಲಿಗೆ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಷರತ್ತು ಬದ್ದ ಅನುಮತಿ.ನೀಡಿದ್ದು ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜಿಸಿದ್ದಾರೆ
ಪ್ರತಿಭಟನಾ ರ್ಯಾಲಿಯಲ್ಲಿನಾಡದ್ರೋಹಿ, ಯಾವುದೇ ಜಾತಿ ಭಾಷೆಗೆ ಧಕ್ಕೆ ತರುವ ಘೋಷಣೆ ಕೂಗದಂತೆ ಮತ್ತು ನಾಡದ್ರೋಹಿ ಚಟುವಟಿಕ ನಡೆಸದಂತೆ ಷರತ್ತು. ವಿಧಿಸುವ ಮೂಲಕ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ
ನಗರದ ಸಂಭಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ.ಒದಗಿಸಲಾಗಿದೆ
ಮಹಾ ಸಚಿವರು ಜಿಲ್ಲೆ ಪ್ರವೇಶಿಸದಂತೆ ಬೆಳಗಾವಿ ಗಡಿಯಲ್ಲಿ ನಾಕಾ ಬಂದಿ. ತೀವ್ರ ನಿಗಾ ಇಟ್ಟಿರುವ ಬೆಳಗಾವಿ ಪೊಲೀಸರು. ಮಹಾರಾಷ್ಟ್ರ ರಾಜ್ಯದಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಪ್ರತಯೊಂದು ರಸ್ತೆಗಳಲ್ಲಿಯೂ ಪೋಲೀಸರು ನಿಗಾವಹಿಸಿದ್ದಾರೆ
ಬೆಳಗಾವಿ: ಎಂ.ಇ.ಎಸ್ ರ್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರಿಗೆ ಪ್ರತಿಬಂಧಕಾಜ್ಞೆ ಹೊರಡಿಸಿ ಬೆಳಗಾವಿ ಜಿಲ್ಲೆ ಪ್ರವೇಶ ನಿರ್ಬಂಧಿಸಿದ ಹಿನ್ನೆಲೆ. ಬೆಳಗಾವಿ ನಗರ ಹಾಗೂ ಜಿಲ್ಲೆಯ ಗಡಿ ಭಾಗದಲ್ಲಿ ಪೋಲಿಸ್ ಕಣ್ಗಾವಲು.ಏರ್ಪಡಿಸಲಾಗಿದೆ
ರಾಜ್ಯದ ಗಡಿ ಪ್ರವೇಶಿಸುತ್ತಿರುವ ಪ್ರತಿಯೊಂದು ವಾಹನಗಳ ತಪಾಸಣೆ.ಮಾಡಲಾಗುತ್ತಿದೆ ಪ್ರತಿಭಟನಾ ರ್ಯಾಲಿಯಲ್ಲಿ ಮಹಾರಾಷ್ಟ್ರದ ಆರೋಗ್ಯ ಸಚಿವ ದೀಪಕ ಸಾವಂತ ಹಾಗೂ ಸಾರಿಗೆ ಸಚಿವ ದಿವಾಕರ್ ರಾವತ ಭಗಹಿಸುವದಾಗಿ ಹೇಳಿದ್ದರು ಸಚಿದ್ವಯರು ಭಾಗವಹಿಸಿದರೆ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಯರಾಮ ಅವರು ಈ ಇಬ್ಬರು ಸಚಿವರು ಬೆಳಗಾವಿ ಗಡಿ ಪ್ರವೇಶ ಮಾಡದಂತೆ ನಿಷೇದಾಜ್ಞೆ ಹೊರಡಿಸಿ ನಿರ್ಭಂಧ ಹೇರಿದ್ದರು