ಬೆಳಗಾವಿ: ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ 11 ರಂದು ಮಧ್ಯಾಹ್ನ 3 ಗಂಟೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಬೆಳಗಾವಿ ಹೊಸ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಚುನಾವಣೆ-
ಬೆಳಗಾವಿ ಮಹಾನಗರ ಪಾಲಿಕೆಯ ವಿವಿಧ 4 ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳ ಚುನಾವಣೆಯನ್ನು ಆಗಸ್ಟ 9 ರಂದು ಮುಂಜಾನೆ 11 ಗಂಟೆಗೆ ಪಾಲಿಕೆ ಪರಿಷತ್ ಸಭಾಗೃಹದಲ್ಲಿ ಜರುಗಲಿದೆ ಎಂದು ಮಹಾನಗರ ಪಾಲಿಕೆ ಪರಿಷತ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಪ್ಯಾಕೇಜ್
ಬೆಳಗಾವಿ: ಸನ್ 2016-17 ನೇ ಸಾಲಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಬೆಳಗಾವಿ ತಾಲೂಕಿಗೆ ಸಂಬಂಧಪಟ್ಟ ಆಲೂಗಡ್ಡೆ ಬೆಳೆಗಾರರಿಗೆ ಆಲೂಗಡ್ಡೆ ವಿಶೇಷ ಪ್ಯಾಕೇಜ ಕಾರ್ಯಕ್ರಮದಡಿ ಜೈವಿಕ ಗೊಬ್ಬರ, ಸಸ್ಯ ಸಂರಕ್ಷಣಾ ಔಷಧಿ ಹಾಗೂ ಬೆಳೆ ವಿಮೆಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ನಿಗಧಿತ ನಮೂನೆಯ ಅರ್ಜಿಯು ಕಛೇರಿಯಲ್ಲಿ ಲಭ್ಯವಿದ್ದು ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ ಬೆಳಗಾವಿ ಇವರಿಗೆ ಸಲ್ಲಿಸಿಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0831-2431559ಗೆ ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ತೋಟಗಾರಿಕೆ ನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ; ಅರ್ಜಿ ಆಹ್ವಾನ
ಬೆಳಗಾವಿ: ಐ.ಬಿ.ಪಿ.ಎಸ್. ಪರೀಕ್ಷೆ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರೋಬ್ರೇಷನರಿ ಆಫೀಸರ್ ಹುದ್ದೆಗಳಿಗಾಗಿ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಆನಲೈನ್ ಮೂಲಕ ಅರ್ಜಿಯನ್ನು ಅಹ್ವಾನಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಿತಿತಿ.ibಠಿs.ಛಿom ಈ ವೈಬ್‍ಸೈಟಿಗೆ ಸಂಪರ್ಕಿಸಕಿಸಲು ತಿಳಿಸಲಾಗಿದೆ. ಅಥವಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಹಾಗೂ ಅರ್ಜಿಯನ್ನು ಆನ್‍ಲೈನನಲ್ಲಿ ಸಲ್ಲಿಸಲು ಆಗಸ್ಟ 13 ಕೊನೆಯ ದಿನವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ