ಬೆಳಗಾವಿ- ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರಿಂದ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಸ್ಥಾಪನೆ ವಿಚಾರ ಜಾತಿವಾರು ಜನಗಣತಿಯಲ್ಲಿ ಹಿಂದುಳಿದವರ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದು ವರದಿ ಬಂದಿದೆ ಹೀಗಾಗಿ ಬಿಜೆಪಿಯ ಕಣ್ಣು ಇದೀಗ ದಲಿತರು, ಹಿಂದುಳಿದವರ ಕಡೆ ನೆಟ್ಟಿದೆ ವರದಿ ಬಂದ ತಕ್ಷಣ ದಲಿತ ಕಾಲೋನಿಗೆ ತೆರಳಲು ಯಡಿಯೂರಪ್ಪ ಅವರ ಪಕ್ಷದವರಿಗೆ ಆದೇಶ ನೀಡಿದ್ದಾರೆ ಇದು ಅವರ ಮೂರ್ಖತನ ತೋರಿಸುತ್ತದೆ ಎಂದು ಬೆಳಗಾವಿಯಲ್ಲಿ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ
ಮುಂದಿನ ಅವಧಿಗು ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಬಿಜೆಪಿ ಪಕ್ಷ ಅಧಿಕಾರದ ಹಗಲುಗನಸು ಕಾಣುತ್ತಿದೆ ಕಾಂಗ್ರೆಸ್ ಪಕ್ಷ ಎಲ್ಲಾ ಸಮೂದಾಯ ಜನರನ್ನು ಒಟ್ಟಿಗೆ ತೆದುಕೊಂಡು ಹೋಗಿದೆ ಬೆಳಗಾವಿಯಲ್ಲಿ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಉತ್ತಮ ಕೆಲಸ ಮಾಡಿದೆ ಆರದೇ ನಮ್ಮ ಸರ್ಕಾರ ಪ್ರಚಾರದಲ್ಲಿ ಹಿಂದೆ ಉಳಿದಿದೆ ಮುಂದಿನಗಳಲ್ಲಿ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾವುದು
13ರಂದು ನಗರ ಪ್ರದಕ್ಷಣೆ
ಸೆ 13 ರಂದು ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಹಾಗು ಗಣೇಶ ವಿಸರ್ಜನಾ ಮಾರ್ಗದ ಪರಶೀಲನೆ ಮಾಡುವದಾಗಿ ಸಚಿವ ಜಾರಕಿಹೊಳಿ ತಿಳಿಸಿದ್ದಾರೆ ಮಹಾದಾಯಿ ಹಾಗು ಕಾವೇರಿ ವಿವಾದದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಚರ್ಚೆ ಮಾಡುತ್ತನೆ ಶೀಘ್ರದಲ್ಲಿಯೇ ಜಿಲ್ಲೆಯಿಮದ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ದು ಜಿಲ್ಲೆಗೆ ವಿಶೇಷ ಅನುದಾನ ತರುತ್ತೇನೆ ನಗರದಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ಮಂಜೂರಾಗಿದ್ದು ಈ ಕುರಿತು ಆರೋಗ್ಯ ಇಲಾಖೆಯ ಕಾರ್ಯದರ್ಶಿಯ ಜೊತೆ ಮಾತನಾಡಿದ್ದೇನೆ ಆದಷ್ಟು ಬೇಗನೆ ಟೆಂಡರ್ ಕರೆಯಲಾಗುವದು ಎಂದರು
