Breaking News

ಸಮಾನ ಶಿಕ್ಷಣ ನೀತಿ ಜಾರಿಗೆ ಚಿಂತನೆ-ತನ್ವೀರ ಸೇಠ

ಬೆಳಗಾವಿ-ಎಲ್ಲ ಮಕ್ಕಳಿಗೂ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ಸಿಗಬೇಕು ಎನ್ನುವದು ಸರ್ಕಾರದ ಸಂಕಲ್ಪವಾಗಿದೆ ಅದಕ್ಕಾಗಿ ರಾಜ್ಯದಲ್ಲಿ ಸಮಾನ ಶಧಿಕ್ಷಣ ನೀತಿ ಜಾರಿಗೆ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ ತಿಳಿಸಿದ್ದಾರೆ
ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನವ್ಹೆಂಬರ ಒಂದು ರಾಜ್ಯೋತ್ಸವದ ದಿನದಂದು ಒಂದು ಹೊಸ ವಿಧಾನಕ್ಕೆ ಚಾಲನೆ ನೀಡಲಿದ್ದೇವೆ.ಖಾಸಗಿ ಕಂಪನಿಗಳ ಸಹಕಾರದೊಂದಿಗೆ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುವದು ಹೊಸ ವಿಧಾನದ ಸ್ವರೂಪವಾಗಿದೆ ಎಂದರು
ರಾಜ್ಯದಲ್ಲಿ 47 ಸಾವಿರ ಶಾಲೆಗಳು ಇದ್ದು ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ವರದಿ ಬಂದ ನಂತರ ಯಾವ ಯಾವ ಶಾಲೆಗಳನ್ನು ನೆಲಸಮ ಮಾಡಬೇಕು ಯಾವ ಶಾಲೆಗಳನ್ನು ದುರಸ್ಥಿ ಮಾಡಬೇಕು ಎನ್ನುದರ ಬಗ್ಗೆ ನಿರ್ಧರಿಸುತ್ತೇವೆ ಎಂದು ಸಚಿವರು ತಿಳಿಸಿದರು
ರಾಜ್ಯದ 5000 ಸಾವಿರ ಶಾಲೆಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ದುರಸ್ಥಿ ಮಾಡುತ್ತೇವೆ ಉಳಿದ ಶಾಲೆಗಳ ಅಭಿವೃದ್ಧಿಗೆ ಸಕಾರದಿಂದ ವಿಶೇಷ ಅನುದಾನ ಕೇಳಲು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಸಚಿವ ತನ್ವೀರ್ ಸೇಠ ತಿಳಿಸಿದರು
ಬೆಳಗಾವಿ ಜಿಲ್ಲೆಯಲ್ಲಿ ಶ್ಯು ಹಗರಣದ ಕುರಿತು ಮಾಹಿತಿ ಸಿಕ್ಕಿದ್ದು ಈ ಕುರಿತು ಪರಶೀಲನೆ ಮಾಡಿ ಕ್ರಮ ಕೈಗೊಳ್ಳುವದಾಗಿ ಹೇಳಿದರು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *