ಒಂದೇ ಕ್ಷೇತ್ರದಲ್ಲಿ ಇಷ್ಟೊಂದು ಕ್ಯಾಮರಾ ಅಳವಡಿಸುತ್ತಿರುವದು ದೇಶದಲ್ಲೇ ಮೊದಲು
ಬೆಳಗಾವಿ-ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಶಾಸಕ ಅಭಯ ಪಾಟೀಲ ಹೊಸ ದಾಖಲೆ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆಯುತ್ತಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮೂರು ಪೋಲೀಸ್ ಠಾಣೆಗಳ ವ್ಯಾಪ್ತಿಯ 90 ಸರ್ಕಲ್ ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸುವ ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದ್ದಾರೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಹಾಗೂ ಸಂಚಾರದಲ್ಲಿ ಶಿಸ್ತು ಕಾಪಾಡಲು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದು ಶಾಸಕ ಅಭಯ ಪಾಟೀಲರ ಕನಸಿನ ಯೋಜನೆ ಆಗಿದ್ದು, ಬೆಳಗಾವಿ ದಕ್ಷಿಣ ಮತಕ್ಷೇತ್ರದ 90 ಜಂಕ್ಷನ್ (ವೃತ್ತಗಳಲ್ಲಿ) ಗಳಲ್ಲಿ ಸ್ಥಳಗಳಲ್ಲಿ 256 ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಡೀ ಬೆಳಗಾವಿ ದಕ್ಷಿಣ ಮತ ಕ್ಷೇತ್ರವನ್ನು ಕ್ಯಾಮರಾ ರೆಡಾರ್ ನಲ್ಲಿ ತರುವದು,ಶಾಸಕ ಅಭಯ ಪಾಟೀಲರ ಸಂಕಲ್ಪವಾಗಿದೆ.
ಶಹಾಪುರ ಪ್ರದೇಶದ ಬ್ಯಾರಿಸ್ಟರ್ ನಾಥ್ ಪೈ ಚೌಕದಲ್ಲಿ ಕ್ಯಾಮೆರಾಗಳ ಅಳವಡಿಕೆ ಆರಂಭವಾಗಿದೆ. .ಈ ಸಂಧರ್ಭದಲ್ಲಿಅಭಯ ಪಾಟೀಲ ಮಾತನಾಡಿ,ದಕ್ಷಿಣ ಮತಕ್ಷೇತ್ರದಲ್ಲಿ 256 ಕ್ಯಾಮರಾ ಅಳವಡಿಸುವ ಮೂಲಕ, ನಗರ ಮತ್ತು ಉಪನಗರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಘಟನೆಗಳನ್ನು ತಡೆಯುವ ಜತೆಗೆ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು.
ಈ ವ್ಯವಸ್ಥೆಗೆ ಮೂರು ಕೋಟಿ ಇಪ್ಪತ್ತು ಲಕ್ಷ ರೂ.ವೆಚ್ಚದಲ್ಲಿ ಮಾಡಲಾಗುತ್ತಿದೆ. ರಾತ್ರಿ ವೇಳೆಯೂ ಈ ಕ್ಯಾಮೆರಾಗಳಿಂದ ಸ್ಪಷ್ಟ ಚಿತ್ರೀಕರಣ ನಡೆಯಲಿದೆ. ಅತ್ಯಾಧುನಿಕ ಕ್ಯಾಮರಾಗಳ ಅಳವಡಿಕೆಯಿಂದ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ನಗರದಲ್ಲಿ ಶಾಂತಿ ಕದಡುವ ಕಿಡಗೇಡಿಗಳನ್ನು ಪತ್ತೆ ಮಾಡಲು ಈ ಕ್ಯಾಮರಾಗಳು ಸಹಾಯವಾಗಲಿವೆ.
ಒಂದೇ ಕ್ಷೇತ್ರದಲ್ಲಿ 90 ವೃತ್ತಗಳಲ್ಲಿ, 256 ಕ್ಯಾಮರಾ ಅಳವಡಿಸುತ್ತಿರುವದು ದೇಶದಲ್ಲೇ ಮೊದಲು,ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿದೆ ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯೆಕ್ತಪಡಿಸಿದರು.ಈ ಸಂಧರ್ಭದಲ್ಲಿ ಎಸಿಪಿ ಕಟ್ಟಿಮನಿ,ಪಿಐ ಬಡಿಗೇರ ಉಪಸ್ಥಿತರಿದ್ದರು.