ಬೆಳಗಾವಿ- ಬೆಳಗಾವಿ ನಗರದಲ್ಲಿ ಹಾಳಾಗಿ ಹೋಗಿರುವ ನಾಲೆಗಳನ್ನು ವಿಸ್ತರಿಸಿ,ನಾಲೆಗಳಲ್ಲಿ ಚರಂಡಿ ನೀರು ಸೇರದಂತೆ ಪೈಪ್ ಲೈನ್ ಮಾಡಿ ,ನಾಲೆಗಳಲ್ಲಿ ಬೋಟಿಂಗ್ ಮಾಡುವ ವಿನೂತನ ಯೋಜನೆಯನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ರೂಪಿಸಿದ್ದಾರೆ.
ಸ್ನೇಹಿತರೇ, “Water public transport”
ಶಾಸಕರ ಕನಸಿನ ಕಲ್ಪನೆ, ಅತೀ ಶೀಘ್ರದಲ್ಲಿ ಬೆಳಗಾವಿ ನಗರಕ್ಕೆ, ಹೊಸ ಮೆರಗು ನೀಡಲಿದೆ. ಈ ಯೋಜನೆ ಕುರಿತು ಇಂದು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕ ಅಭಯ ಪಾಟೀಲ ಸುದೀರ್ಘ ಚರ್ಚೆ ನಡೆಸಿದರು.
ಸುಮಾರು 3 km ವ್ಯಾಪ್ತಿ ಇರುವ ” ನಗ್ಜರಿ ನಾಲಾ” ವನ್ನು ವಿಸ್ತರಿಸಿ, ಯಾವ ರೀತಿಯಲ್ಲಿ ಬೋಟ್ ಮುಖಾಂತರ water public transport ” ( ನೀರಿನ ಸಾರ್ವಜನಿಕ ಸಾರಿಗೆ)
ಕಲ್ಪನೆಯ ಯೋಜನೆಗೆ ಅಂತಿಮ ಹಂತದ ರೂಪ ರೇಷೆ ನೀಡುವ ಬಗ್ಗೆ ಸಭೆಯಲ್ಲಿ ಶಾಸಕರು ಮಂಡಿಸಿದರ, ಈ ಪರಿಕಲ್ಪನೆಯಿಂದ ವಿಶೇಷವಾಗಿ ಪ್ರವಾಸಿಗರನ್ನು ಆಕರ್ಷಿಸಲು, ರಸ್ತೆ ಸಾರಿಗೆ ಜನದಟ್ಟಣೆಯ ನಿಯಂತ್ರಿಸಲು, ಇಡೀ ಬೆಳಗಾವಿ ನಗರ ಸೌಂದರ್ಯಕ್ಕೆ ಆದ್ಯತೆ ನೀಡುವ ಭಾಗವಾಗಿ ಈ ಯೋಜನೆ ನಿಜಕ್ಕೂ ಆಧುನಿಕ ಸ್ಪರ್ಶಕ್ಕೆ ಹೊಸ ನಾಂದಿಯಾಗಲಿದ್ದು, ಕರ್ನಾಟಕ ರಾಜ್ಯದಲ್ಲಿ ಇದು ಪ್ರಥಮ ಪ್ರಯತ್ನ ಎನ್ನಬಹುದು..
ಈ ಯೋಜನೆಯ ಜೋಡಣೆ ಜನವಸತಿ ಪ್ರದೇಶಗಳಾದ ನಿತ್ಯಾನಂದ ನಗರ, ಘೋಡ್ಸೆವಾಡಿ, ಜೌಗಲೆವಾಡಿ, ಅಯೋದ್ಯಾ ನಗರ, S. V. ಕೋಲನಿ, ಶಾಂತಿ ಕೋಲನಿ, ಮರಾಠಾ ಕೋಲನಿ, ಜಕ್ಕೆರಿ ಹೊಂಡ, ಶಾಸ್ತ್ರೀ ನಗರ, ಕಪಲೇಶ್ವರ ಕೋಲನಿ, ಮಹಾದ್ವಾರ ರೋಡ ಭಾಗಗಳಲ್ಲಿ ಜೋಡಿಸಲು ನಿರ್ಧರಿಸಲಾಗಿದೆ.