ಮಹಾರಾಷ್ಟ್ರದ ಜಲಸಂಪನ್ಮೂಲ ಖಾತೆ ಸಚಿವ ಶ್ರೀ ಜಯಂತ ಪಾಟೀಲ ಹಾಗೂ ಗೃಹ ಸಚಿವ ಶ್ರೀ ಶಂಭುರಾಜ ಪಾಟೀಲ ಅವರು ಮಂಗಳವಾರ ಸಂಜೆ 5 ಗಂಟೆಗೆ ಸಾತಾರಾ ಜಿಲ್ಲೆಯ ಕೊಯ್ನಾ ಡ್ಯಾಂ ಪ್ರದೇಶಕ್ಕೆ ಭೆಟ್ಟಿ ನೀಡಿ ನೀರಿನ ಸಂಗ್ರಹ,ಬಿಡುಗಡೆಯ ಬಗ್ಗೆ ಪರಿಶೀಲನೆ ನಡೆಸಿದರು
.105 ಟಿ ಎಮ್ ಸಿ ಸಾಮರ್ಥ್ಯದ ಡ್ಯಾಮ್ ತುಂಬಲು ಇನ್ನು ಕೇವಲ 12 ಟಿ ಎಮ್ ಸಿ ಬಾಕಿಯಿದೆ.ಕೃಷ್ಣಾ ನದಿಗೆ 55 ಸಾವಿರ ಕ್ಯೂಸೆಕ್ಸದಷ್ಟು ನೀರು ಬಿಡುಗಡೆಯಾಗುತ್ತಿದೆ.ಕಳೆದ ವರ್ಷದ ಪ್ರವಾಹದ ಕಹಿ ಅನುಭವದ ಹಿನ್ನೆಲೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಖಾತೆಯ ಸಚಿವ ಶ್ರೀ ರಮೇಶ ಜಾರಕಿಹೊಳಿ ಅವರು ಇತ್ತೀಚೆಗೆ ಮಹಾರಾಷ್ಟ್ರದ ಜಲಸಂಪನ್ಮೂಲ ಖಾತೆಯ ಸಚಿವರೊಂದಿಗೆ ಸಂಭವನೀಯ ಪ್ರವಾಹದ ಬಗ್ಗೆ ಚರ್ಚಿಸಿದ್ದರಲ್ಲದೇ ಪ್ರವಾಹ ಮೇಲ್ವಿಚಾರಣೆ ಸಮಿತಿಗಳನ್ನು ರಚಿಸಿದ್ದರು.
ಅಶೋಕ ಚಂದರಗಿ,ಬೆಳಗಾವಿ
9620114466
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ