Breaking News

ಪರಮ ಭಕ್ತನಿಂದ, ಶಾರದೆಯ ಮಡಿಲು. ಶೃಂಗಾರ….ಗುರು..ದೇವೋ -ಅಭಯ….!!!!

ಬೆಳಗಾವಿ-ಕಲಿತ ಶಾಲೆ,ಕಲಿಸಿದ ಗುರುಗಳನ್ನು ಸ್ಮರಿಸುವುದು ಇಂದಿನ ಅಧುನಿಕ ಯುಗದಲ್ಲಿ ವಿರಳ,ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಕಲಿತ ಶಾಲೆ ಸ್ವರೂಪವನ್ನೇ ಬದಲಶಯಿಸಿ ಕಲಿಸಿದ ಗುರುಗಳನ್ನು ವಿಭಿನ್ನವಾಗಿ ಸ್ಮರಿಸಿ, ಇಂದಿನ ಜನಪ್ರತಿನಿಧಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.

ಶಾಸಕ ಅಭಯ ಪಾಟೀಲರು ಕಲಿತಿದ್ದು ಬೆಳಗಾವಿ ಶಹಾಪೂರ ಪ್ರದೇಶದಲ್ಲಿರುವ ಚಿಂತಾಮಣರಾವ್ ಸರ್ಕಾರಿ ಶಾಲೆಯಲ್ಲಿ ಈ ಶಾಲೆಯು ಶತಮಾನೋತ್ಸವದ ಸಂಬ್ರಮದಲ್ಲಿದ್ದು ಶತಮಾನೋತ್ಸವವನ್ನು ಶಾಸಕ ಅಭಯ ಪಾಟೀಲ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ಶತಮಾನೋತ್ಸವದ ಸವಿನೆನಪಿಗಾಗಿ ಶಾಸಕ ಅಭಯ ಪಾಟೀಲ ಮೂರು ಕೋಟಿ ರೂ ಖರ್ಚು ಮಾಡಿ ದೇಶದ ಸರ್ಕಾರಿ ಶಾಲೆಗಳಲ್ಲಿ ಎಲ್ಲಿಯೂ ಇಲ್ಲದ,ಹೈಟೆಕ್ ದ್ವನಿ ವ್ಯೆವಸ್ಥೆ ಹೊಂದಿರುವ ಸಭಾಗೃಹ ನಿರ್ಮಿಸಿದ್ದಾರೆ.ಜೊತೆಗೆ ಈ ಶಾಲೆಯಲ್ಲಿ ಕಲಿಸಿದ ಗುರುಗಳ ಸ್ಮರಣೆಗಾಗಿ,”ಗುರು ಸ್ಮರಣೆ” ಎಂಬ ಕಟ್ಟಡವನ್ನು ನಿರ್ಮಿಸಿದ್ದು ಡಿಸೆಂಬರ್ 22 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶತಮಾನೋತ್ಸವದ ಸಂಬ್ರಮಕ್ಕೆ ಚಾಲನೆ ನೀಡುವದರ ಜೊತೆಗೆ ಹೈಟೆಕ್ ಸಭಾಗೃಹವನ್ನು ಉದ್ಘಾಟಿಸಲಿದ್ದಾರೆ.

ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿರುವ ಗುರು ಸ್ಮರಣೆ ಕಟ್ಟಡವನ್ನು ಲೋಕೋಪಯೋಗಿ ಸಚಿವರು ಉದ್ಘಾಟನೆ ಮಾಡಲಿದ್ದು,ಶತಮಾನೋತ್ಸವದ ಕಾರ್ಯಕ್ರಮದ ತಯಾರಿಯನ್ನು ಶಾಸಕ ಅಭಯ ಪಾಟೀಲರು ಖುದ್ದಾಗಿ ಮಾಡುತ್ತಿರುವದು ವಿಶೇಷ.

ಇದಕ್ಕೆ ಅಂತಾರೆ ಅಭಿಮಾನ,….

ಕಲಿತ ಶಾಲೆಯ ಶತಮಾನೋತ್ಸವದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಶಾಸಕ ಅಭಯ ಪಾಟೀಲ ,ಶತಮಾನೋತ್ಸವದ ಧ್ವಜ ಸಿದ್ದಪಡಿಸಿದ್ದಾರೆ. ಶಾಲೆಯ ಹಳೆಯ ವಿಧ್ಯಾರ್ಥಿಯಾಗಿರುವ ಶಾಸಕ ಅಭಯ ಪಾಟೀಲ ನಾನೊಬ್ಬ ಶಾಸಕ ಅನ್ನೋದನ್ನು ಮರೆತು ಶಾಲೆಯ ಆವರಣದಲ್ಲಿ,ಶಾಲೆಯ ಎದುರಿನ ರಸ್ತೆಗಳಲ್ಲಿ ರಾತ್ರಿ ಹೊತ್ತಿನಲ್ಲಿಯೂ ಸ್ವತಃ ಧ್ವಜ ಕಟ್ಟುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಶಾಸಕ ಅಭಯ ಪಾಟೀಲ ಅವರ ಜೊತೆ ಈ ಶಾಲೆಯಲ್ಲಿ ಕಲಿತ 85,86,89,ವರ್ಷ ವಯಸ್ಸಿನ ಹಳೆಯ ವಿಧ್ಯಾರ್ಥಿಗಳೂ ಧ್ವಜ ಕಟ್ಟುವ ಕಾರ್ಯದಲ್ಲಿ ಶಾಸಕ ಅಭಯ ಪಾಟೀಲರಿಗೆ ಸಾಥ್ ನೀಡುವ ಮೂಲಕ ಕಲಿತ ಶಾಲೆಯ ಬಗ್ಗೆ ಅಭಿಮಾನ ಇದ್ರೆ ಹೀಗಿರಬೇಕು ಎಂದು ಶಾಸಕ ಅಭಯ ಪಾಟೀಲರು ತೋರಿಸಿ,ಇತರರಿಗೆ ಮಾದರಿಯಾಗಿದ್ದಾರೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *