ಬೆಳಗಾವಿ- ಬೆಳಗಾವಿಯಲ್ಲಿ 774 ಎಕರೆ ಕರ್ನಾಟಕ ಸರ್ಕಾರದ ಜಮೀನು ಡಿಫೆನ್ಸ್ ಕಬ್ಜಾದಲ್ಲಿದೆ.ಈ ಜಮೀನು ಮರಳಿ ಪಡೆದು ಇದೇ ಜಾಗದಲ್ಲಿ ಐಟಿ,ಬಿಟಿ ಪಾರ್ಕ್ ನಿರ್ಮಿಸುವಂತೆ, ಶಾಸಕ ಅಭಯ ಪಾಟೀಲ ಅವರು ಕಳೆದ ಒಂದು ದಶಕದಿಂದ ನಡೆಸಿದ ಹೋರಾಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸ್ಪಂದನೆ ಸಿಕ್ಕಿದೆ.
ಶಾಸಕ ಅಭಯ ಪಾಟೀಲ ಅವರು ಬೆಳಗಾವಿಯಲ್ಲಿರುವ 774 ಎಕರೆ ಜಮೀನು ಮರಳಿಸುವಂತೆ,ವಿಧಾನಸಭೆಯ ಅಧಿವೇಶನದಲ್ಲಿ ಹತ್ತು ಹಲವು ಬಾರಿ ಒತ್ತಾಯ ಮಾಡಿದ್ದರು,ಮುಖ್ಯಮಂತ್ರಿಗಳು ಕೂಡಲೇ ದೆಹಲಿಗೆ ನಿಯೋಗ ಕೊಂಡೊಯ್ದು ಕೇಂದ್ರದ ರಕ್ಷಣಾ ಸಚಿವರನ್ನು ಭೇಟಿಯಾಗಿ ಜಮೀನು ಮರಳಿಸುವ ಕುರಿತು ಚರ್ಚೆ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದರು
ಶಾಸಕ ಅಭಯ ಪಾಟೀಲ ಅವರ ದಶಕದ ಹೋರಾಟ ಈಗ ಯಶಸ್ಸಿನ ಹೊಸ್ತಿಲಲ್ಲಿದೆ. ಅಭಯ ಪಾಟೀಲ ಅವರ ಮನವಿಗೆ ಸ್ಪಂದಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ, ಬೆಳಗಾವಿಯಲ್ಲಿ 774 ಕರ್ನಾಟಕ ಸರ್ಕಾರದ ಜನೀನು ರಕ್ಷಣಾ ಇಲಾಖೆಯ ಸ್ವಾಧೀನದಲ್ಲಿದೆ. ರಾಜ್ಯ ಸರ್ಕಾರ ಈ ಜಮೀನಿನಲ್ಲಿ ಐಟಿ,ಬಿಟಿ ಪಾರ್ಕ್ ನಿರ್ಮಿಸಿ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಯೋಜನೆ ರೂಪಿಸಿದ್ದು ನಮ್ಮ ಜಮೀನು ನಮಗೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದು .ರಕ್ಷಣಾ ಸಚಿವರು ಸಿಎಂ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.