ಬೆಳಗಾವಿ-ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹಳೆಯ ಡಕೋಟಾ ಬಸ್ ಗಳನ್ನು ಕಳಸುತ್ತಿದ್ದು,ಉತ್ತರ ಕರ್ನಾಟಕ ಗುಜ್ಜರಿಯ ಗೋಡಾವ್ನ ಅಲ್ಲ,ಎಂದು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಸಾರಿಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಗಾಳಿಪಟ ಉತ್ಸವದ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಹಳೆಯ ಬಸ್ ಗಳಿಗೆ ಸ್ಟೀಕರ್ ಅಂಟಿಸಿ,ಗುಜ್ಜರಿಗೆ ಹಾಕುವ ಹಂತದಲ್ಲಿರುವ ಬಸ್ ಗಳನ್ನು ಹುಬ್ಬಳ್ಳಿ ಮತ್ತು ಬೆಳಗಾವಿಯ ಡಿಪೋಗಳಿಗೆ ಕಳುಹಿಸಿ,ಉತ್ತರ ಕರ್ನಾಟಕದ ಜನರಿಗೆ ಅವಮಾನ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.ಸರ್ಕಾರ ಈ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಅಭಯ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.
ಹೊಸ ಬಸ್ ಗಳನ್ನು ನಮಗೂ ಕೊಡಿ,ಬೆಳಗಾವಿ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿದ್ದು ಬೆಳಗಾವಿಗೂ ಇಲೆಕ್ಟ್ರಿಕ್ ಬಸ್ ಗಳನ್ನು ಕೊಡಬೇಕು,ಉತ್ತರ ಕರ್ನಾಟಕದ ಜಿಲ್ಲೆಗಳ ಡಿಪೋಗಳಿಗೂ ಹೊಸ ಬಸ್ ಗಳನ್ನು ಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕು,ಅಧಿಕಾರಿಗಳು ಮಾಡಿರುವ ಪ್ರಮಾದದಿಂದ ಲೋಪ ಆಗುತ್ತಿದೆ ಈ ವಿಚಾರವನ್ನು ಸಾರಿಗೆ ಮಂತ್ರಿಗಳ ಗಮನಕ್ಕೆ ತರುತ್ತೇನೆ.ಅಪಾಯದ ಅಂಚಿನಲ್ಲಿರುವ ಬಸ್ ಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ.ಗುಜ್ಜರಿಗೆ ಹಾಕಬೇಕಾದ ಬಸ್ ಗಳನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಲು ಇದೇನು ಗುಜ್ಜರಿಯ ಗೋಡಾವ್ನ ಅಲ್ಲ ಎಂದು ಶಾಸಕ ಅಭಯ ಪಾಟೀಲ ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.