ಅಭಯ ರೈತರ ಹರಿಕಾರ…ಸತ್ತ ಎಮ್ಮೆಗೂ 50 ಸಾವಿರ ಪರಿಹಾರ….!!!!
ಬೆಳಗಾವಿ- ಎರಡು ತಿಂಗಳ ಹಿಂದೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ರೈತನ ಎಮ್ಮೆಯೊಂದು ವಿದ್ಯುತ್ ತಂತಿ ತಗುಲಿ ಸಾವನ್ನೊಪ್ಪಿತ್ತು ಶಾಸಕ ಅಭಯ ಪಾಟೀಲರ ರೈತಪರ ಕಾಳಜಿಯಿಂದಾಗಿ ಎಮ್ಮೆ ಕಳೆದುಕೊಂಡ ರೈತನಿಗೆ 50 ಸಾವಿರ ಪರಿಹಾರ ದೊರಕಿಸಿ ಕೊಡುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕ ಅಭಯ ಪಾಟೀಲ ಈಗ ರೈತನಿಗೆ ಪರಿಹಾರ ದೊರಕಿಸಿ ಕೊಡುವ ಮೂಲಕ ರೈತರ ಹರಿಕಾರರಾಗಿ ಎಲ್ಲರ ಗಮನ ಸೆಳೆದಿದ್ದಾರೆ
ಬೆಳಗಾವಿ ದಕ್ಷಿಣ ಮತಕ್ಷೇತ್ರದ ರೈತ ಚಂದ್ರಕಾಂತ ಪಾಟೀಲ ಅವರಿಗೆ ಸೇರಿದ ಎಮ್ಮೆ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ದಿಂದಾಗಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿತ್ತು ರೈತನ ಪರವಾಗಿ ಹೋರಾಟ ಮಾಡಿದ ಶಾಸಕ ಅಭಯ ಪಾಟೀಲ ಹೆಸ್ಕಾಂ ಇಲಾಖೆಯಿಂದ ಎಮ್ಮೆ ಕಳೆದುಕೊಂಡ ರೈತನಿಗೆ ಕೇವಲ ಎರಡೇ ತಿಂಗಳಲ್ಲಿ 50ಸಾವಿರ ರೂ ಪರಿಹಾರ ದೊರಕಿಸಿ ಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ
ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ದಿಂದಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ ಅವರು ಪರಿಹಾರಕ್ಕಾಗಿ ಅಲೆದಾಡುವ ಪರಿಸ್ಥತಿಯಲ್ಲಿ ಶಾಸಕ ಅಭಯ ಪಾಟೀಲ ಸತ್ತೆಮ್ಮೆಗೆ ಅಲ್ಪಾವಧಿಯಲ್ಲಿ ಪರಿಹಾರ ದೊರಕಿಸಿ ರೈತನಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದು ಅಭಯ ಪಾಟೀಲರ ರೈತಪರ ಕಾಳಜಿಯನ್ನು ತೋರಿಸುತ್ತದೆ.
ಹೆಸ್ಕಾಂ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ರೈತನಿಗೆ 50 ಸಾವಿರ ರೂಗಳ ಪರಿಹಾರದ ಚೆಕ್ ನ್ನುರೈತ ಚಂದ್ರಕಾಂತ ಪಾಟೀಲರಿಗೆ ನೀಡಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ