Breaking News
Home / Breaking News / ರಾಣಿ ಚನ್ನಮ್ಮ ವಿವಿ, ಜೆ ಎನ್ ಯು ಆಗದಿರಲಿ- ಸುರೇಶ ಅಂಗಡಿ ಕಳವಳ

ರಾಣಿ ಚನ್ನಮ್ಮ ವಿವಿ, ಜೆ ಎನ್ ಯು ಆಗದಿರಲಿ- ಸುರೇಶ ಅಂಗಡಿ ಕಳವಳ

ಬೆಳಗಾವಿ-ಕಳೆ‌ದ ಮೂವತ್ತು ವರ್ಷದಿಂದ ಹೋರಾಟದ ಮೂಲಕ ರಾಣಿ ಚೆನ್ನಮ್ಮ ವಿವಿ ನಿರ್ಮಾಣವಾಗಿದೆ. ಅದಕ್ಕೆ ಬಿ.ಎಸ್‌.ಯಡಿಯೂರಪ್ಪನವರ ಕೊಡುಗೆ ಸಾಕಷ್ಟಿದೆ. ಈ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯವಾಗಿಯೇ ಉಳಿಯಬೇಕು ಇದು ಮತ್ತೊಂದು ಜೆ ಎನ್ ಯು ಆಗಬಾರದು ಎಂದು ಸಂಸದ ಸುರೇಶ ಅಂಗಡಿ ಕಳವಳ ವ್ಯೆಕ್ತ ಪಡಿಸಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಅನೇಕ ದಿನಗಳಿಂದ ಅರಣ್ಯ ಇಲಾಖೆಯ ಸುಪರ್ದಿಗೆಯಲ್ಲಿದ್ದ ಆರ್ ಸಿಯುವನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಮುಕ್ತ ಮಾಡಲು ಪ್ರಯತ್ನ ಮಾಡುತ್ತಿವೆ.ಹೆದ್ದಾರಿಯಲ್ಲಿರುವುದರಿಂದ ಇಲ್ಲಿ ಅಪಘಾತವಾಗುವ ಸಾಧ್ಯತೆಯಿಂದ 20 ಕೋಟಿ ರು. ವೆಚ್ಚದಲ್ಲಿ ಅಲ್ಲಿ ಕೇಳಸೇತುವೆ ನಿರ್ಮಣ ಮಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಅದಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಎಲ್ಲರೀತಿಯ ಪ್ರಯತ್ನಗಳು ನಡೆದಿವೆ ಎಂದು ಅಂಗಡಿ ತಿಳಿಸಿದರು

ವಿಶ್ವ ವಿದ್ಯಾಲಯದ ಕೆಳ ಸೇತುವೆ ನಿರ್ಮಾಣದ ಸಂಧರ್ಭದಲ್ಲಿ ಸ್ಥಳೀಯ ಶಾಸಕ ಸತೀಶ ಜಾರಕಿಹೊಳಿ ಹಾಗೂ ಸಂಸದ ಪ್ರಕಾಶ ಹುಕ್ಕೇರಿ ಅವರಿಗೂ ಕರೆ ಮಾಡಿದ್ದೆ. ಅದರೆ ಅವರು ಸ್ವೀಕರಿಸಲಿಲ್ಲ.

ನೀನ್ನೆ ನಡೆದ ಘಟನೆಯಲ್ಲಿ ಸತೀಶ ಜಾರಕಿಹೊಳಿ ಅವರ ಬೆಂಬಲಿಗರಾಗಿದ್ದರೇ ಅವರ ಮೇಲೆ ಸತೀಶ ಅವರು ಕ್ರಮ ಕೈಗೊಳ್ಳಬೇಕೆಂದರು.ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ಬೇಜವಬ್ದಾರಿಯ ಪೊಲೀಸ್ ಅಧಿಕಾರಿಗಳಿಂದ ಇಂಥ ಘಟನೆ ನಡೆಯಲು ಕಾರಣವಾಗಿದೆ. ರಾಣಿ ಚನ್ನಮ್ಮ ವಿವಿ ಜಿಎನ್ ಯು ಆಗಬಾರದು. ರಾಣಿ ಚನ್ನಮ್ಮ ವಿವಿಯಾಗಿಯೇ ಉಳಿದುಕೊಳ್ಳಬೇಕು. ದೇಶ ದ್ರೋಹಿಗಳು ಇರಬಾರದು. ಸತೀಶ ಜಾರಕಿಹೊಳಿ ಅವರ ಬೆಂಬಲಿಗರಾಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.ಎಂದು ಸುರೇಶ ಅಂಗಡಿ ಮನವಿ ಮಾಡಿಕೊಂಡರು

ಇಲ್ಲಿನ ಕಾನೂನು ಸುವ್ಯವಸ್ಥೆ ಸರಿಯಾಗಬೇಕು. ಸತೀಶ ಜಾರಕಿಹೊಳಿ ಬೆಂಬಲಿಗರಾದರೆ ಅವರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸುರೇಶ ಅಂಗಡಿ ಆಗ್ರಹಿಸಿದರು.

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *