Breaking News
Home / Breaking News / ತುಕ್ಕು ಹಿಡಿದ ವ್ಯವಸ್ಥೆಗೆ ಪೇಂಟ್ ಬಳಿದ ಅಭಯ ಪಾಟೀಲ

ತುಕ್ಕು ಹಿಡಿದ ವ್ಯವಸ್ಥೆಗೆ ಪೇಂಟ್ ಬಳಿದ ಅಭಯ ಪಾಟೀಲ

ಜನ ಕಂಪ್ಲೇಂಟ್ ಕೊಡುವ ಮೊದಲೇ ಪೇಂಟ್ ಹಚ್ಚಿದ ಶಾಸಕ ಅಭಯ ಪಾಟೀಲ

ಬೆಳಗಾವಿ – ಯೋಜನೆ ಯಾವುದೇ ಇರಲಿ ದುಡ್ಡು ಖರ್ಚು ಮಾಡುವದು ನಂತರ ಅದನ್ನು ಮರೆತು ಬಿಡುವದು , ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ರೂಢಿ ಯಾಗಿ ಬಿಟ್ಟಿದೆ ಆದರೆ ಅಭಯ ಪಾಟೀಲರ ಸ್ಟೈಲೇ ಬೇರೆ ಅನ್ನೋದನ್ನು ಅವರು ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ

ಈ ಹಿಂದೆ ಅಭಯ ಪಾಟೀಲರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾಗಿದ್ದಾಗ ನಗರದ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ ಮಕ್ಕಳ ಮನರಂಜನೆಗಾಗಿ ಲಕ್ಷಾಂತರ ರೂ ಅನುದಾನದಲ್ಲಿ ಅನೇಕ ಆಟಕೀಯ ಸಲಕರಣೆಗಳನ್ನು ಅಳವಡಿಸಿದ್ದರು ತಮ್ಮ ಕ್ಷೇತ್ರದ ಅನೇಕ ಗಾರ್ಡನ್ ಗಳಲ್ಲಿ ಅನೇಕ ಗೇಮ್ ಐಟಂ ಗಳನ್ನು ಅಳವಡಿಸಿದ್ದರು

ಈ ಹಿಂದೆ ಅಭಯ ಪಾಟೀಲರೇ ಅಳವಡಿಸಿದ್ದ ಗೇಮ್ಸ್ ಐಟಂ ಗಳು ಸರಿಯಾದ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿರುವದನ್ನು ಗಮನಿಸಿದ ಅವರು ಶ್ರಮದಾನದ ಮೂಲಕ ತುಕ್ಕು ಹಿಡಿದಿರುವ ಆಟಕೀಯ ಸಲಕರಣೆಗಳಿಗೆ ಬಣ್ಣ ಹಚ್ಚಿ ಎಲ್ಲರ ಗಮನ ಸೆಳೆದಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮೊದಲೇ ಬೆಳಗಾವಿಯಲ್ಲಿ ಸ್ವಚ್ಛ ಬೆಳಗಾವಿ ಸುಂದರ ಬೆಳಗಾವಿ ಎಂಬ ಅಭಿಯಾನ ಆರಂಭಿಸಿದ್ದ ಶಾಸಕ ಅಭಯ ಪಾಟೀಲರು ಕಳೆದ ಒಂದು ದಶಕದಿಂದ ಈ ಅಭಿಯಾನ ಮುಂದುವರೆಸಿದ್ದಾರೆ ಪ್ರತಿ ಭಾನುವಾರ ಸೂರ್ಯೋದಯದ ಮೊದಲು ಕ್ಷೇತ್ರದಲ್ಲಿ ತಮ್ಮ ತಂಡದೊಂದಿಗೆ ಸ್ವಚ್ಛತಾ ಅಭಿಯಾನ ನಡೆಸುವ ಅವರು ಈ ವಾರ ಗಾರ್ಡನ್ ಗಳಲ್ಲಿ ಮಕ್ಕಳ ಆಟಕೀಯ ಸಲಕರಣೆಗಳಿಗೆ ಬಣ್ಣ ಹಚ್ಚಿ ಅವುಗಳಿಗೆ ಆಯಿಲ್ ಹಾಕಿ ಅವುಗಳಿಗೆ ಮರು ಜೀವ ನೀಡಿದ್ದಾರೆ

ಸರ್ಕಾರ ನಮ್ಮದಿಲ್ಲ ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎನ್ನುವ ನೆಪ ಹೇಳದೇ ಶಾಸಕ ಅಭಯ ಪಾಟೀಲ ಶ್ರಮದಾನದ ಮೂಲಕ ಪೇಂಟ್ ಬಳಿದು ಕ್ಷೇತ್ರದ ಮತ್ತೊಂದು ಕಂಪ್ಲೇಂಟ್ ಸಾಲ್ವ ಮಾಡಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಗಾರ್ಡನ್ ಗಳ ಅಭಿವೃದ್ಧಿ ಮಾಡಲಾಗಿತ್ತು.ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ ಅಳವಡಿಸಿದ್ದ ಮಕ್ಜಳ ಆಟಕೀಯ ಸಾಮುಗ್ರಿಗಳು ಹಾಳಾಗಿವೆ .ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿಲ್ಲ ಈಗ ನಾವು ಅವುಗಳನ್ನು ರಿಪೇರಿ ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ದಕ್ಷಿಣ ಮತಕ್ಷೇತ್ರದ ಎಲ್ಲ ಗಾರ್ಡನ್ ಗಳಲ್ಲಿ ಮಕ್ಕಳ ಅಟಕ್ಕಾಗಿ ಶಿವಾಜಿ ಗಾರ್ಡನ್ ಮಾದರಿಯಲ್ಲಿ ಗೇಮ್ಸ ಐಟಂ ಅಳವಡಿಸುತ್ತೇನೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುತ್ತೇನೆ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದ್ದಾರೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *