ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ
ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ ಅಪಪ್ರಚಾರ ನಡೆಸಿದೆ ಎಂದು ಆರೋಪಿಸಿ ಧರ್ಮಸ್ಥಳದ ಸಾವಿರಾರು ಭಕ್ತರು ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಲಿದ್ದು ಮರೆವಣಿಗೆ ಆರಂಭವಾಗುವ ಮುನ್ನ ಶಾಸಕ ಅಭಯ ಪಾಟೀಲ ಅವರು ಹತ್ತು ಸಾವಿರಕ್ಕೂ ಹೆಚ್ಚು ರೇನ್ ಕೋಟ್ ಗಳನ್ನು ವಿತರಿಸಲಿದ್ದಾರೆ
ಮಳೆ ಬರ್ತಾ ಇದೆ.ಇಂದು ಬೆಳಗಾವಿ ನಗರದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸುವ ಭಕ್ತರಿಗೆ ತೊಂದರೆ ಆಗಬಾರದು ಎನ್ನುವ ಮುಂದಾಲೋಚನೆಯಿಂದ ಧರ್ಮರಕ್ಷಣೆಗಾಗಿ ನಡೆಯುತ್ತರುವ ಮೌನ ಮೆರವಣಿಗೆಯಲ್ಲಿ ಭಾಗವಹಿಸುವ ಧರ್ಮರಕ್ಷಕರಿಗೆ ಉಚಿತವಾಗಿ ಶಾಸಕ ಅಭಯ ಪಾಟೀಲ ರೇನ್ ಕೋಟ್ ವಿತರಿಸಲಿದ್ದಾರೆ.
ಧರ್ಮಸ್ಥಳದ ಪಾವಿತ್ರತೆಯ ರಕ್ಷಣೆಗಾಗಿ ಇಂದು ಮಂಗಳವಾರ 10-30 ಗಂಟೆಗೆ ಬೆಳಗಾವಿಯ ಧರ್ಮವೀರ ಸಂಬಾಜಿ ವೃತತದಿಂದ ಮೌನ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸುತ್ತಾರೆ.ಅನೇಕ ಮಠಾಧೀಶರು ಧರ್ಮಸ್ಥಳ ಶ್ರೀ ಮಂಜುನಾಥನ ಸಹಸ್ರಾರು ಭಕ್ತರು ಮಳೆಯ ಆತಂಕವಿಲ್ಲದೇ ಭಾಗವಹಿಸಿ ಮೌನ ಮೆರವಣಿಗೆ ನಡೆಸಿ ಧರ್ಮಸ್ಥಳ ಪರವಾಗಿ ತಮ್ಮ ಒತ್ತಾಯ ಮಂಡಿಸಲಿದ್ದಾರೆ.
ಮೌನ ಮೆರವಣಿಗೆ ಎಲ್ಲಿ ? ಯಾರು ಭಾಗವಹಿಸುತ್ತಾರೆ ಇಲ್ಲಿದೆ ಸಮಗ್ರ ಸುದ್ದಿ
ಕಳೆದ ಒಂದು ತಿಂಗಳಿನಿಂದ ಹಿಂದೂ ಧರ್ಮಿಯರ ಧಾರ್ಮಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಕ್ಷೇತ್ರಕ್ಕೆ ಕಳಂಕ ತರುವಂತಹ ಘಟನೆಗಳು ನಡೆಯುತ್ತಿವೆ.
ಕ್ಷೇತ್ರದ ಬಗ್ಗೆ ಕಳಂಕ ತರುವ ವ್ಯಕ್ತಿಗಳು ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಆರೋಪಗಳಿಗೆ ಸರಕಾರ ಸ್ಪಂಧಿಸುವ ಮೂಲಕ ತನಿಖೆಗಾಗಿ ಎಸ್.ಐ.ಟಿ. ತಂಡವನ್ನು ರಚಿಸಿತ್ತು. ಆದರೆ ಈ ಎಸ್.ಐ.ಟಿ ತಂಡ ನಡೆಸಿದ ತನಿಖೆಯಲ್ಲಿ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ. ಹೀಗಾಗಿ ಕ್ಷೇತ್ರಕ್ಕೆ ಕಳಂಕ ತರುವ ವ್ಯಕ್ತಿಗಳು ಮಾಡಿರುವ ಆರೋಪಗಳು ಸುಳ್ಳಾಗಿದ್ದು, ಈ ಆರೋಪಗಳನ್ನು ಮಾಡಿದ ವ್ಯಕ್ತಿಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಮಂಗಳವಾರ ಬೆಳಗಾವಿಯಲ್ಲಿ ಬೃಹತ್ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮಠಾಧೀಶರು ಭಾಗವಹಿಸುತ್ತರೆ
ಈ ಪ್ರತಿಭಟನೆಯು ಮಂಗಳವಾರ ಬೆಳಿಗ್ಗೆ 10-30 ಗಂಟೆಗೆ ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಿಂದ ಪ್ರಾರಂಭಗೊಂಡು ಕಿರ್ಲೋಸ್ಕರ ರಸ್ತೆ, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಕಾಕತಿವೇಸ , ರಾಣೀ ಚೆನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅಲ್ಲಿ ಮನವಿಯನ್ನು ಅರ್ಪಿಸಲಾಗುವುದು.
ಈ ಪ್ರತಿಭಟನೆಯಲ್ಲಿ ಪರಮಪೂಜ್ಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಸಿದ್ಧಸಂಸ್ಥಾನ ಮಠ, ನಿಡಸೋಸಿ.ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಗುರುಶಾಂತೇಶ್ವರ ಹಿರೇಮಠ, ಹುಕ್ಕೇರಿ. ಪರಮಪೂಜ್ಯ ಶ್ರೀ ಸಂಪಾದನಾ ಮಹಾಸ್ವಾಮಿಗಳು, ಸಂಪಾದನಾ ಚರಮೂರ್ತಿಮಠ, ಚಿಕ್ಕೋಡಿ. .ಪರಮಪೂಜ್ಯಶ್ರೀ ನೀಲಕಂಠ ಮಹಾಸ್ವಾಮಿಗಳು ಮಹಾಂತದುರದುAಡೇಶ್ವರ ಮಠ, ಮುರಗೋಡ. ಪರಮಪೂಜ್ಯಶ್ರೀ ಪ್ರಭುನೀಲಕಂಠ ಮಹಾಸ್ವಾಮಿಗಳು, ಮೂರುಸಾವಿರ ಮಠ, ಬೈಲಹೊಂಗಲ. ಪರಮಪೂಜ್ಯಶ್ರೀ ಗಂಗಾಧರ ಮಹಾಸ್ವಾಮಿಗಳು, ಮಡಿವಾಳೇಶ್ವರ ಮಠ, ಹೊಸೂರ..ಪರಮಪೂಜ್ಯಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಸೋಮಶೇಖರ ಮಠ, ಮುನವಳ್ಳಿ. ಪರಮಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಮೂಲಿಮಠ, ಸವದತ್ತಿ. ಪರಮಪೂಜ್ಯ ಶ್ರೀಚನ್ನಬಸವ ದೇವರು, ರುದ್ರಸ್ವಾಮಿಗಳ ಮಠ ಬಿಳಕಿ ಅವರೊಳ್ಳಿ. ಪರಮಪೂಜ್ಯಶ್ರೀ ಶಿವಸೋಮೇಶ್ವರ ಶಿವಾಚಾರ್ಯರು, ಮುಕ್ತಿಮಠ, ಭೂತರಾಮನಹಟ್ಟಿ ,ಪರಮಪೂಜ್ಯ ಶಿವಾನಂದ ಭಾರತಿ ಮಹಾಸ್ವಾಮಿಗಳು, ಸಾಧುಸಂಸ್ಥಾನಮಠ, ಇಂಚಲ. ಪರಮಪೂಜ್ಯ ಶಿವಪುತ್ರ ಮಹಾಸ್ವಾಮಿಗಳು, ಸಿದ್ಧಾರೂಢಮಠ, ಚಿಕ್ಕಮುನವಳ್ಳಿ. ಪರಮಪೂಜ್ಯಶ್ರೀ ಶಿವಮೂರ್ತಿ ಸ್ವಾಮಿಜೀ ಆರಳಿಕಟ್ಟಿ, ಪರಮಪೂಜ್ಯಶ್ರೀ ರುದ್ರಕೇಸರಿಮಠ ಸ್ವಾಮೀಜಿ ಹಿಂಡಲಗಾ, ಪರಮಪೂಜ್ಯಶ್ರೀ ಶಿವಾನಂದಶಿವಾಚಾರ್ಯ ಸ್ವಾಮೀಜಿ ಮುತ್ನಾಳ, ಪರಮಪೂಜ್ಯಶ್ರೀ ಶಿವನಾಂದ ಸ್ವಾಮೀಜಿ ನಿಲಜಗಿ, ಪರಮಪೂಜ್ಯಶ್ರೀ ಬಡೆಕೊಳ್ಳವ್ಮಠ ಸ್ವಾಮೀಜಿ, ಪರಮಪೂಜ್ಯಶ್ರೀ ಚಂದ್ರಶೇಖರ ಸಾಮೀಜಿ ಹುಕೇರಿಮಠ ವಿನಾಯಕ ನಗರ, ಹಿಂಡಲಗಾ , ಸ್ವಾಮಿ ಆತ್ಮಪ್ರಭಾನಂದಜಿ ಕಾರ್ಯದರ್ಶಿಗಳು ರಾಮಕೃಷ್ಣ ಮಿಷನ ಆಶ್ರಮ ಹಾಗೂ ಇನ್ನಿತರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಈ ಮೌನ ಪ್ರತಿಭಟನೆ ನಡೆಯಲಿದೆ.
ಅದರಂತೆ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಸಂಸದ ಅಮರಸಿಂಹ ಪಾಟೀಲ ಮಾಜಿ ವಿಧಾನ ಪರಿಷತ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ವಿಠ್ಠಲ ಹಲಗೇಕರ, ಮಾಜಿ ಶಾಸಕ ಅನಿಲ ಬೆನಕೆ, ಸಂಜಯ ಪಾಟೀಲ, ಅರವಿಂದ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಡಾ.ರವಿ ಪಾಟೀಲ , ಮುರುಘೇಂದ್ರ ಪಾಟೀಲ, ಗುರು ಮೆಟಗುಡ್ಡ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಈ ಪ್ರತಿಭಟನೆಯಲ್ಲಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ.