Breaking News

ಪೌರತ್ವ ಕಾಯ್ದೆ ಬೆಂಬಲಿಸಿ ಬೆಳಗಾವಿಯಲ್ಲಿ ಪಂಜಿನ ಮೆರವಣಿಗೆ

ಪೌರತ್ವ ಕಾಯ್ದೆ ಬೆಂಬಲಿಸಿ ಬೆಳಗಾವಿಯಲ್ಲಿ ಪಂಜಿನ ಮೆರವಣಿಗೆ

ಬೆಳಗಾವಿ-ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು

ಕೈಯಲ್ಲಿ ಹೊತ್ತಿದ ಮಶಾಲ್ ಹಿಡಿದು ನರೇಂದ್ರ ಮೋದಿ ಆಗೇ ಬಡೋ ಹಮ್ ತುಮ್ಹಾರೆ ಸಾಥ್ ಹೈ ಎಂದು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪೌರತ್ವ ಕಾಯ್ದೆಗೆ ಸಪೋರ್ಟ್ ಮಾಡಿದರು.

ಬೆಳಗಾವಿಯ ಬಸವೇಶ್ವರ್ ಸರ್ಕಲ್ ಹತ್ತಿರದ ಮಹಾತ್ಮಾಪುಲೆ ರಸ್ತೆಯಿಂದ ಆರಂಭಗೊಂಡ ಪಂಜಿನ ಮೆರವಣಿಗೆ ವಡಗಾವಿ,ಶಹಾಪೂರ ಪ್ರದೇಶದಲ್ಲಿ ಬೆಳಕು ಚೆಲ್ಲಿತು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ನೇತ್ರತ್ವದಲ್ಲಿ ನಡೆದ ಪಂಜಿನ ಮೆರವಣಿಗೆಯಲ್ಲಿ ನೂರಾರು ಅಭಿಮಾನಿಗಳು ಭಾಗವಹಿಸಿ ಎಲ್ಲರ ಗಮನ ಸೆಳೆದರು

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಯಾವುದೇ ಜಾತಿ,ಧರ್ಮದ ವಿರೋಧಿ ಕಾಯ್ದೆ ಅಲ್ಲ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ದೇಶದಲ್ಲಿ ಮೊದಲ ಬಾರಿಗೆ ,ಬೆಳಗಾವಿಯಲ್ಲಿ ಪಂಜಿನ ಮೆರವಣಿಗೆ ಮಾಡುವ ಮೂಲಕ ಪೌರತ್ವ ಕಾಯ್ದೆಗೆ ಬೆಂಬಲ ಕೊಡುತ್ತಿದ್ದೇವೆ .ಎಂದರು ಅಭಯ ಪಾಟೀಲ

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.