Breaking News

ಬಾರ್ಡರ್ ಮಾಡೆಲ್ ಫಾಲೋ ಮಾಡುವಂತೆ ಶಾಸಕ ಅನೀಲ ಬೆನಕೆ,ಆರ್ಡರ್….!!

ಬೆಳಗಾವಿ- ಐದು ತಿಂಗಳ ಸುದೀರ್ಘ ಅವಧಿಯ ಬಳಿಕ,ಕ್ರಾಂತಿಯ ನೆಲ ಬೆಳಗಾವಿಯಲ್ಲಿ,ನಮ್ಮ ಹೆಮ್ಮೆಯ ಅತೀ ಎತ್ತರದ ರಾಷ್ಟ್ರ ಧ್ವಜ ಇಂದು ಹಾರಾಡಿತು‌.

ಅನೇಕ ತಾಂತ್ರಿಕ ಕಾರಣಗಳಿಂದ ಅತೀ ಎತ್ತರದ ರಾಷ್ಟ್ರ ಧ್ವಜವನ್ನು ಹಾರಿಸಲು ಸಾಧ್ಯವಾಗಿರಲಿಲ್ಲ,ಆದರೆ ಪಾಲಿಕೆ,ಮತ್ತು ಬುಡಾ ಅಧಿಕಾರಿಗಳ ಸತತ ಪ್ರಯತ್ನದ ಫಲವಾಗಿ ಧ್ವಜ ಮತ್ತೆ ಹಾರಾಡುತ್ತಿದೆ.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಇಂದು ಕೋಟೆ ಕೆರೆ ಪಕ್ಕದಲ್ಲಿರುವ ಧ್ವಜ ಸ್ತಂಭದ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದರು.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬೆಳಗಾವಿ ಮಹಾನಗರ ಪಾಲಿಕೆಯ ವಿಶೇಷ ಅನುದಾನದಲ್ಲಿ 1 ಕೋಟಿ 62 ಲಕ್ಷ ₹ ವೆಚ್ಚದಲ್ಲಿ ಅತೀ ಎತ್ತರದ ಧ್ವಜ ಸ್ತಂಭ ನಿರ್ಮಿಸಲಾಗಿದೆ.ಮಳೆಗಾಲದಲ್ಲಿ ಧ್ವಜ ಹರಿದು ಧ್ವಜಕ್ಕೆ ಅವಮಾನ ಆಗಬಾರದು ಎನ್ನುವ ದೃಷ್ಠಿಯಿಂದ ಧ್ವಜ ಹಾರಿಸಲು ಸಾಧ್ಯ ಆಗಿರಲಿಲ್ಲ,ಈಗ ಅನೇಕ ತೊಂದರೆಗಳನ್ನು ನಿವಾರಿಸಿ ತಾತ್ಕಾಲಿಕವಾಗಿ ಧ್ವಜ ಹಾರಿಸಲಾಗಿದೆ.ನಿರಂತರವಾಗಿ ಮಳೆ ಶುರುವಾದರೆ.ಧ್ವಜ ಹಾರಿಸಲು ಸಾದ್ಯವಾಗುವದಿಲ್ಲ ಎಂದು ಶಾಸಕ ಅನೀಲ ಬೆನಕೆ ತಿಳಿಸಿದರು.

ಭಾರತದ ಗಡಿಯಲ್ಲೂ ಅತೀ ಎತ್ತರದ ರಾಷ್ಟ್ರಧ್ವಜ ಇದೆ.ಈ ಧ್ವಜ ವರ್ಷದ ಹನ್ನೆರಡು ತಿಂಗಳೂ ಹಾರಾಡುತ್ತದೆ.ಅಲ್ಲಿ ಯಾವರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ.ಅಲ್ಲಿಯ ಧ್ವಜವನ್ನು ಯಾವ ಬಟ್ಟೆಯಿಂದ ಸಿದ್ಧ ಪಡಿಸಲಾಗಿದೆ, ಎಂದು ಅದ್ಯಯನ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಎಂದು ಅನೀಲ ಬೆನಕೆ ತಿಳಿಸಿದರು.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *