Breaking News

ಬೆಳಗಾವಿ, ದಕ್ಷಿಣದಲ್ಲಿ ಶಿವ ಚರಿತ್ರೆ….ಉತ್ತರದಲ್ಲಿ ಬಸವ ಚರಿತ್ರೆ….!!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತವೈಭವ ಸಾರುವ ಶಿವ ಚರಿತ್ರೆಯ ನಿರ್ಮಾಣ ಮಾಡಿ ರಾಷ್ಟ್ರದ ಗಮನ ಸೆಳೆದಿದ್ದರು

ಬೆಳಗಾವಿಯ ಛತ್ರಪತಿ ಶಿವಾಜಿ ಗಾರ್ಡನ್ ನಲ್ಲಿ ಶಿವಾಜಿ ಮಹಾರಾಜರ ಬದುಕು,ಮತ್ತು ಅವರ ಹೋರಾಟದ ಇತಿಹಾಸ ಹೇಳುವ, ಧ್ವನಿ ಮತ್ತು ಬೆಳಕಿನ ಮೂಲಕ ಇಹಾಸದ ಸಂಪೂರ್ಣ ಸಂದೇಶ ನೀಡುವ ಶಿವ ಚರಿತ್ರೆ ನಿರ್ಮಿಸಿದ್ದಾರೆ.

ಈಗ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರು ಸದ್ದಿಲ್ಲದೇ ಬೆಳಗಾವಿಯಲ್ಲಿ ಅನುಭವ ಮಂಟಪ ನಿರ್ಮಿಸುವ ಯೋಜನೆ ರೂಪಿಸುತ್ತಿದ್ದಾರೆ. ಬಸವಕಲ್ಯಾಣ ಮಾದರಿಯಲ್ಲಿ ಅನುಭವ ಮಂಟಪ ನಿರ್ಮಿಸಲು ಸಂಕಲ್ಪ ಮಾಡಿರುವ ಅನೀಲ ಬೆನಕೆ ಅವರು,ಬೆಳಗಾವಿಯ ಶ್ರೀನಗರದ ಬಾಲ ಭವನವನ್ನು ಅನುಭವ ಮಂಟಪವನ್ನಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುತ್ತಿದ್ದಾರೆ.

ಈ ಕುರಿತು ಬಸವಕಲ್ಯಾಣಕ್ಕೂ ಹೋಗಿ ಬಂದಿರುವ ಶಾಸಕ ಅನೀಲ ಬೆನಕೆ,ಸ್ಥಳಿಯ ಲಿಂಗಾಯತ ಸಮಾಜದ ಮುಖಂಡರನ್ನು ಸಂಪರ್ಕಿಸಿ ಅನುಭವ ಮಂಟಪದಲ್ಲಿ ಏನೇನು ಇರಬೇಕು ಎನ್ನುವದರ ಬಗ್ಗೆ ಸಮಾಲೋಚನೆ ಮಾಡಿದ್ದಾರೆ.

ಬೆಳಗಾವಿಯ ಶ್ರೀನರದ ಬಾಲ ಭವನ, ಅನುಭವ ಮಂಟಪ ಆಗಲಿದ್ದು,ಈ ಭವನದಲ್ಲಿ ಜಗಜ್ಯೋತಿ ಬಸವೇಶ್ವರರ ಸಂದೇಶ ಸಾರುವ ಬಸವ ಚರಿತ್ರೆಯ ನಿರ್ಮಾಣವಾಗಲಿದೆ.

ಕನ್ನಡ,ಮರಾಠಿ,ಸೇರಿದಂತೆ ಇತರ ಭಾಷೆಗಳಲ್ಲಿಯೂ ಬಸವಣ್ಣನವರ ವಚನಗಳು ಕೇಳಲು ಸಿಗಬೇಕು ಬಸವಣ್ಣನವರ ಸಂದೇಶ ಜಾಗತಿಕ ಮಟ್ಟದಲ್ಲಿ ತಲುಪಬೇಕು ಎನ್ನುವದು,ಶಾಸಕ ಅನೀಲ ಬೆನಕೆ ಅವರ ಕನಸಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *