ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿರುವ ಘಟಪ್ರಭಾ ಎಡದಂಡೆ ಕಾಲುವೆ,ಬಲದಂಡೆ ಕಾಲುವೆಗಳಲ್ಲಿ ಹರಿಯುವ ನೀರನ್ನು ಪಂಪ್ ಸೆಟ್ ಗಳ ಮೂಲಕ ಕೊಳ್ಳೆ ಹೊಡೆಯಲಾಗುತ್ತಿದೆ ಎಲ್ಲಿ ನೋಡಿದಲ್ಲಿ ಕಾಲುವೆಗಳನ್ನು ಒಡೆದು ಹೊಲಗಳಿಗೆ ನೀರು ಹರಿಸಲಾಗುತ್ತಿದೆ ನೀರಾವರಿ ಇಲಾಖೆ ಅಧಕಾರಿಗಳು ಕೂಡಲೇ ಕ್ರಮ ಜರುಗಿಸಬೇಕೆಂದು ಮಾಜಿ ಮಂತ್ರಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಡಿಪಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು
ಕೆಲವು ಶ್ರೀಮಂತ ರೈತರ ಪುಂಡಾಟಿಕೆಯಿಂದ ಸಾಮಾನ್ಯ ರೈತರು ತೊಂದರೆ ಅನುಭವಿಸಬೇಕಾಗಿದೆ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಿ ಎಲ್ಲ ಆಕ್ರಮ ಪಂಪ್ ಸೆಟ್ ಗಳನ್ನು ತೆರವು ಮಾಡಬೇಕು ಈ ಎರಡು ಕಾಲುವೆಗಳಲ್ಲಿ ಮೂರು ಟಿಎಂಸಿನೀರು ಹರಿದು ಬಿಡಲಾಗುತ್ತಿದೆ ಆದರೂ ಕಾಲುವೆಯ ಕೆಳ ಭಾಗದ ರೈತರಿಗೆ ನೀರು ಮುಟ್ಟುತ್ತಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು
ಬೆಳಗಾವಿಯಲ್ಲಿ ಕೆಡಿಪಿ ಸಭೆ. ಸಭೆಯಲ್ಲಿ ಅಥಣಿ ಡಿಎಸ್ ಪಿ ವಿರುದ್ಧ ಆಕ್ರೋಶ. ಚಿಂಚಲಿ ಮಾಯಕ್ಕ ದೇವಸ್ಥಾನದ ಬಳಿ ಸರಕಾರಿ ಜಮೀನು ಅತಿಕ್ರಮಣ. ಅತಿಕ್ರಮಣ ಬಿಡಿಸಲು ಹೋದ ಪುರಸಭೆ ಅಧಿಕಾರಿಗೆ ತಳಿಥ. ಎಫ್ ಐ ಆರ್ ಆದರೂ ಕ್ರಮ ಕೈಗೊಳ್ಳದ ಅಧಿಕಾರಿ ವಿರುದ್ದ ಶಾಸಕ ಐಹೊಳೆ ಆಕ್ರೋಶ. ಸಚಿವ ರಮೇಶ ಜಾರಕಿಹೊಳಿ ಕ್ರಮಕ್ಕೆ ಸೂಚನೆ. ಸೂಕ್ತ ಭದ್ರತೆ ಒದಗಿಸಿ ಡಿಎಸ್ ಪಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾದ ಎಸ್ ಪಿ ಡಾ. ರವಿಕಾಂತೇಗೌಡ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ