ಬೆಳಗಾವಿ- ದಿನ ಕಳೆದಂತೆ ಬೆಳಗಾವಿ ನಗರ ಸ್ಮಾರ್ಟ ಆಗುತ್ತಿದೆ ನಗರದ ಬಿ ಆರ್ ಅಂಬೇಡ್ಕರ್ ರಸ್ತೆಯನ್ನು ಹೈಟೆಕ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಫಿರೋಜ್ ಸೇಠ ಚಾಲನೆ ನೀಡಿದರು
ರಾಜ್ಯ ಸರ್ಕಾರದ ನೂರು ಕೋಟಿ ವಿಶೇಷ ಅನುದಾನದಲ್ಲಿ ಅಂಬೇಡ್ಕರ್ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಮಳೆಗಾಲ ಶುರು ಆಗುವ ಮೊದಲು ಈ ರಸ್ತೆ ಲಂಡನ್ ಸ್ಟ್ರೀಟ್ ಮಾದರಿಯಲ್ಲಿ ಅಭಿವೃದ್ಧಿಗೊಳ್ಳಲಿದೆ
ಚನ್ನಮ್ಮ ವೃತ್ತದಿಂದ ಭೀಮ್ಸ ಕಾಲೇಜಿನ ವರೆಗೆ ಈ ರಸ್ತೆ ಅಭಿವೃದ್ಧಿಯಾಗಿ ನಗರದ ಸ್ಮಾರ್ಟ ರಸ್ತೆಯಾಗಲಿದೆ ಈ ರಸ್ತೆಯಲ್ಲಿನ ವಿದ್ಯತ್ ತಂತಿಗಳನ್ನು ತೆರವು ಮಾಡಿ ವಿದ್ಯತ್ ತಂತಿಗಳ ಬದಲಾಗಿ ವಿದ್ಯುತ್ ಕೇಬಲ್ ಹಾಕಿ ಎಲ್ಲ ವಿದ್ಯುತ್ತ ಕಂಬಗಳನ್ನು ತೆಗೆಯಲು 1.2 ಕೋಟಿ ಖರ್ಚು ಮಾಡಲಾಗುತ್ತಿದೆ
ಈ ರಸ್ತೆಯಲ್ಲಿನ ಫುಟ್ ಪಾತ್ ಅಭಿವೃದ್ಧಿಗೆ 80 ಲಕ್ಷ ರಸ್ತೆ ಅಭಿವೃದ್ಧಿಗೆ 80 ಲಕ್ಷ ರಸ್ತೆಯ ವಿಭಾಜಕಗಳಲ್ಲಿ ಗಾರ್ಡನಿಂಗ್ ಮತ್ತು ರಸ್ತೆಯ ಇಕ್ಕೆಲುಗಳಲ್ಲಿ ಹೈಟೆಕ್ ಬೀದಿ ದೀಪಗಳ ಅಳವಡಿಕೆಗೆ 65 ಲಕ್ಷ ರೂ ಖರ್ಚು ಮಾಡಲಾಗುತ್ತಿದೆ
ಅಂಬೇಡ್ಕರ್ ರಸ್ತೆಯನ್ನು ಹೈಟೆಕ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಒಟ್ಟು 3 ಕೋಟಿ 45 ಲಕ್ಷ ರೂಗಳನ್ನು ಖರ್ಚು ಮಾಡಲಾಗುತ್ತಿದೆ ಇಂದಿನಿಂದ ಕಾಮಗಾರಿ ಆರಂಭಗೊಂಡಿದ್ದು ಮಳೆಗಾಲದ ಮುನ್ನ ಈ ರಸ್ತೆಯ ಸ್ವರೂಪ ಬದಲಾಗುತ್ತದೆ ಎಂದು ಶಾಸಕ ಫಿರೋಜ್ ಸೇಠ ತಿಳಿಸಿದ್ದಾರೆ