ಬೆಳಗಾವಿ ಕಪಿಲೇಶ್ವರದ ಬಳಿ ಇತ್ತೀಚಿಗೆ ಉದ್ಘಾಟನೆಗೊಂಡ ರೈಲ್ವೆ ಓವರ್ ಬ್ರೀಡ್ಜ್ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಇಷ್ಟುದಿನ ನಾಮಕರಣ ವಿಚಾರವಾಗಿ ಕನ್ನಡ ಪರ ಹೋರಾಟಗಾರರು ಹಾಗೂ ಎಂಇಎಸ್ ಸಂಘಟನೆ ಹೋರಾಟ ಪ್ರತಿ ಹೋರಾಟ ನಡೆಯುತ್ತಿತ್ತು. ಆದರೇ ಇದೀಗ ಉದ್ಘಾಟನೆಗೆ ಸ್ಥಳೀಯ ಶಾಸಕರಿಗೆ ಆಹ್ವಾನ ನೀಡಲ್ಲ ಎಂದು ಶಾಸಕ ಫಿರೋಜ್ ಸೇಠ್ ಶಿಷ್ಟಾಚಾರ ಉಲ್ಲಂಘನೆಯ ಆರೋಪದ ಬಗ್ಗೆ ಸ್ಪೀಕರಗೆ ದೂರು ನೀಡಿದ್ದಾರೆ. ಡಿ. 25ರಂದು ಕಪಿಲೇಶ್ವರ ಬಳಿಯ ರೈಲ್ವೆ ಓವರ್ ಬ್ರೀಡ್ಜ್ ಅನ್ನು ರೈಲ್ವೇ ಸಚಿವ ಸುರೇಶ್ ಪ್ರಭು ವಿಡಿಯೋ ಲಿಂಗ್ ಮೂಲಕ ಲೋಕಾರ್ಪಣೆ ಗೊಳಿಸಿದ್ದರು. 19.35 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ರೀಡ್ಜ್ ನಿರ್ಮಾಣಗೊಂಡಿದೆ. ಈ ರೈಲ್ವೆ ಬ್ರಿಡ್ಜ್ ಕಾಮಗಾರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅರ್ಧದಷ್ಟು ಹಣವ ಬಿಡುಗಡೆಗೊಳಿಸಿತ್ತು. ಕಳೆದ ಮೂರು ವರ್ಷಗಳಿಂದ ಪಿಬಿ ರಸ್ತೆಯ ಓವರ್ ಬ್ರಿಡ್ಜ್, ಕಪಿಲೇಶ್ವರ ರೈಲ್ವೆ ಓವರ್ ಬ್ರೀಡ್ಜ್ ನಿರ್ಮಾಣಕ್ಕೆ ನಾನು ಸಾಕಷ್ಟು ಪ್ರಯತ್ನಿಸಿದ್ಧೇನೆ. ಆದರೇ ಯಾರದೋ ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಇಲಾಖೆಗೆ ಉದ್ಘಾಟನೆ ಸಂದರ್ಭದಲ್ಲಿ ನನ್ನ ಹೆಸರನ್ನು ಕೈ ಬಿಡಲಾಗಿದೆ. ಇದು ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸ್ಪೀಕರ್ ಗಮನಕ್ಕೆ ತರಲಾಗಿದ್ದು, ಯಾರೇ ತಪ್ಪು ಮಾಡಿದ್ರು ಅವರ ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕ ಫಿರೋಜ್ ಸೇಠ್ ಹೇಳಿದ್ದಾರೆ. ಶಿಷ್ಟಾಚಾರ ಉಲ್ಲಂಘಟನೆ ಕುರಿತು ಬೆಳಗಾವಿ ರೈಲ್ವೆ ನಿಲ್ದಾಣದ ಅಧಿಕಾರಿ ಸುರೇಶ್ ಮಾತನಾಡಿ, ಹಿರಿಯ ಅಧಿಕಾರಿಗಳು ನನ್ನ ಗಮನಕ್ಕೆ ತರದೆ ರೈಲ್ವೆ ಬ್ರೀಡ್ಜ್ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಿದ್ದಪಡಿಸಿದ್ದಾರೆ. ಇದರಲ್ಲಿ ನನ್ನ ತಪ್ಪಿಲ್ಲ ಹಿರಿಯ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದಿದ್ದಾರೆ.