ಮತ ಎಣಿಕೆ ಪ್ರಕ್ರಿಯೆ ಆರಂಭ
ಬೆಳಗಾವಿ: ಇಲ್ಲಿನ ಜ್ಯೋತಿ ಕಾಲೇಜಿನಲ್ಲಿ ವಾಯವ್ಯ ಶಿಕ್ಷಕರು, ಪದವೀಧರರು ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ.
ಮತಪೆಟ್ಟಿಗೆಗಳನ್ನು ಇರಿಸಲಾದ ಭದ್ರತಾ ಕೊಠಡಿಗಳನ್ನು ತೆರೆಯಲಾಗಿದ್ದು, ಸುಗಮವಾಗಿ ಮತ ಎಣಿಕೆ ಪ್ರಕ್ರಿಯೆ ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ
ಮತ ಎಣಿಕೆ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೇಂದ್ರದಲ್ಲಿ ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಲಾಗಿದೆ.
ಸ್ಟ್ರಾಂಗ್ ರೂಮ್ ಓಪನ್
ಬೆಳಗಾವಿ ಜ್ಯೋತಿ ಕಾಲೇಜಿನಲ್ಲಿ ಮೂರು ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗಿದೆ.ಪ್ರಾದೇಶಿಕ ಆಯುಕ್ತ , ಚುನಾವಣಾ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಸಮ್ಮುಖದಲ್ಲಿ ಓಪನ್ ಆಗಿದ್ದು,ಬೆಳಗಾವಿ , ವಿಜಯಪುರ, ಬಾಗಲಕೋಟೆ ಜಿಲ್ಲೆ ಡಿಸಿ ಹಾಗೂ ಏಜೆಂಟ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ.
ವಾಯುವ್ಯ ಶಿಕ್ಷಕರ, ಪದವೀಧರ, ಪಶ್ವಿಮ ಶಿಕ್ಷಕರ ಕ್ಷೇತ್ರದ ಮತಎಣಿಕೆ ಕಾರ್ಯ. ಶುರುವಾಗಿದೆ.
ಸ್ಟ್ರಾಂಗ್ ರೂಮ್‌ನಿಂದ ಮತಎಣಿಕೆ ಕೊಠಡಿಗೆ ಮತಪೆಟ್ಟಿಗೆ ಒಯ್ಯುಲಾಗಿದೆ.ಮೊದಲು ಮತಗಳ ಸಿಂಧು – ಅಸಿಂಧು ಕಾರ್ಯ ನಡೆಯುತ್ತದೆ.ಸಿಂಧು ಮತಗಳ ಕ್ರೋಢಿಕರಿಸಿ ಬಳಿಕ ಕೋಟಾ ಫಿಕ್ಸ್ ಆಗುತ್ತದೆ.ಗೆಲುವಿನ ಕೋಟಾ ಫಿಕ್ಸ್ ಮಾಡಿದ ಬಳಿಕ ಮತಎಣಿಕೆ ಕಾರ್ಯ ಆರಂಭವಾಗುತ್ತದೆ.
ತಲಾ 25 ಮತಗಳ ಬಂಡಲ್ ಮಾಡಿ ಮತಎಣಿಕೆ ಮಾಡಲಾಗುತ್ತದೆ.ಕೋಟಾ ರೀಚ್ ಆದ ಅಭ್ಯರ್ಥಿ ಗೆಲುವು.
ಕೋಟಾ ರೀಚ್ ಆಗದಿದ್ರೆ ಎರಡನೇ ಪ್ರಾಶಸ್ತ್ಯದ ಮತಎಣಿಕೆ ಮಾಡುವದು, ಮತ ಏಣಿಕೆಯ ಪ್ರಕ್ರಿಯೆ
ಎಲ್ಲಿ ಎಷ್ಟು ಮತಗಳು
ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಪ್ರಕ್ರಿಯೆ ಶುರುವಾಗಿದೆ.
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ 99,598 ಮತದಾರರ ಪೈಕಿ 65,914 ಮತದಾರರು ಮತ ಚಲಾಯಿಸಿದ್ದಾರೆ.
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇಕಡ 66.18ರಷ್ಟು ಮತದಾನ ಆಗಿದೆವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 25,386 ಮತದಾರರ ಪೈಕಿ 21,401 ಮತದಾರರು ಮತ ಚಲಾವಣೆ ಮಾಡಿದ್ದಾರೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 84.30%ರಷ್ಟು ಮತದಾನ ಆಗಿತ್ತು.
ಮತ ಎಣಿಕೆ ಕೇಂದ್ರದಲ್ಲಿಪ್ರತಿ ಕ್ಷೇತ್ರದ ಮತ ಎಣಿಕೆಗೆ ಒಟ್ಟು 11 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆಗಾಗಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಮತ ಎಣಿಕೆ ಕೇಂದ್ರದ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಬೆಳಗ್ಗೆ ಮೊದಲು ಸಿಂಧು- ಅಸಿಂಧು ಮತಗಳ ಬೇರ್ಪಡಿಕೆ ಕಾರ್ಯ ನಡೆಯುತ್ತಿದೆ.ಬಳಿಕ ಮತಗಳ ಕ್ರೂಡೀಕರಣ ನಡೆಯುತ್ತದೆ.ಬಳಿಕ 25 ಮತಗಳ ತಲಾ ಒಂದು ಬಂಡಲ್ ಕಟ್ಟಿ ಮತ ಎಣಿಕೆ ಶುರುವಾಗುತ್ತದೆ.
ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಮತಪತ್ರಗಳ ಬಂಡಲ್ ಗಳನ್ನು ಒಂದೊಂದಾಗಿ ಎಣಿಕೆ ಮಾಡಲಾಗುತ್ತದೆ.ಆವಾಗ ಯಾರು ಹಿನ್ನಡೆ,ಯಾರಿಗೆ ಮುನ್ನಡೆ ಅನ್ನೋದು ಗೊತ್ತಾಗುತ್ತದೆ.