Breaking News
Home / Breaking News / ಮೊದಲ ಸುತ್ತಿನಲ್ಲೇ ಮೀಸೆ ತಿರುವಿದ ಪಕ್ಕು ಮಾಮಾ…!!

ಮೊದಲ ಸುತ್ತಿನಲ್ಲೇ ಮೀಸೆ ತಿರುವಿದ ಪಕ್ಕು ಮಾಮಾ…!!

ಬೆಳಗಾವಿ- ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಮೊದಲ ಸುತ್ತಿನಲ್ಲಿ 10 ಸಾವಿರ ಮತಗಳ ಎಣಿಕೆ ಆಗಿದ್ದು, ಮೊದಲ ಸುತ್ತಿನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ವಾಯುವ್ಯ ಶಿಕ್ಷಕರ ಕ್ಷೇತ್ರದ ಮೊದಲ ಸುತ್ತಿನ ಮತ‌ಎಣಿಕೆ ಮುಕ್ತಾಯ ಆಗಿದೆ‌.ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 1702 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ 4826 ಮತಗಳು ಬಿದ್ದಿವೆ.ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್‌ 3124 ಮತಗಳನ್ನು ಪಡೆದು ಎರಡನೇಯ ಸ್ಥಾನದಲ್ಲಿ ಇದ್ದಾರೆ.

ಈಗ ಎರಡನೇಯ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದ್ದು ಇದೇ ಟ್ರೆಂಡ್ ಮುಂದುವರೆದರೆ ಪ್ರಕಾಶ್ ಹುಕ್ಕೇರಿ ಕೋಟಾ ರೀಚ್ ಮಾಡಿ ಗೆಲುವು ಸಾಧಿಸುವ ಲಕ್ಷಣಗಳಿವೆ.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *