Breaking News

ಸರಳತೆ ಮೆರೆದ ಪರಿಷತ್ ಸದಸ್ಯ ನಾಗರಾಜ್ ಯಾದವ್..!

ಸಾರಿಗೆ ಬಸ್ ನಲ್ಲಿಯೇ ಬೆಂಗಳೂರಿಗೆ ಹೋಗುವ ಮೂಲಕ ಸರಳತೆ ಮೆರೆದ ಪರಿಷತ್ ಸದಸ್ಯ ನಾಗರಾಜ್ ಯಾದವ್..!

ಬೆಳಗಾವಿ: ರಾಜಕೀಯ ವ್ಯಕ್ತಿಗಳೆಂದರೆ ಸಾಕು ಅವರೊಳಗೆ ಜಗತ್ತಿನಲ್ಲಿ ತನಗಿಂತ ಮಿಗಿಲಿಲ್ಲ ಎನ್ನುವ ಭಾವನೆ ಮೂಡಿ ಬಿಡುತ್ತದೆ. ಇಷ್ಟೇ ಅಲ್ಲದೇ ಶಾಸಕರು ಅಂದ್ರೆ ಅವರಿಗೊಂದು ಕಾರು ಹಿಂಬಾಲಕರು ಇರೋದ ಸಹಜ.ಅಂತಹುದರಲ್ಲಿ ಇಲ್ಲೊಬ್ಬ ಶಾಸಕರು ಯಾವುದೇ ರೀತಿಯ ಹಮ್ಮುಬಿಮ್ಮು ಇಲ್ಲದೇ ಸಾಮಾನ್ಯರಂತೆ ಸಾಮಾನ್ಯರಾಗಿ ಸಾರಿಗೆ ಬಸ್ ನ ಸೀಟಿನಲ್ಲಿ ಕುಳಿತು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು, ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರೀಗ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಕುಂದಾನಗರಿ ಬೆಳಗಾವಿ ಜಿಲ್ಲೆಯ ಅಳಿಯ ಆಗಿರುವ ವಿಧಾನ ಪರಿಷತ್ ಸದಸ್ಯ ನಾಗರಾಜ ಜಾಧವ್ ಅವರು ಸರಳತೆ ಮೆರೆದಿದ್ದಾರೆ. ನಾಗರಾಜ್ ಜಾಧವ್ ಅನ್ಯ ಕೆಲಸದ ನಿಮಿತ್ತ ಇವತ್ತು ಬೆಳಗಾವಿಗೆ ಆಗಮಿಸಿದ್ದರು‌. ನಾಗರಾಜ್ ಅವರಿಗೆ ಬೆಳಗಾವಿ ಜಿಲ್ಲೆ ಅಂದ್ರೆ ಎಲ್ಲಿಲ್ಲದ ಪ್ರೀತಿ.ಅಷ್ಟೇ ಅಲ್ಲ ನಾಗರಾಜ್ ಯಾದವ್ ಅವರು ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡುವ ಮೂಲಕ ಸರಳತೆಯನ್ನ ಮೆರೆದಿದ್ದಾರೆ. ಕೋಟ್ಯಾಂತರ ಆಸ್ತಿಯ ಒಡೆಯನಾಗಿದ್ದರೂ ಕೂಡ ತಮ್ಮ ಸರಳೆಯಲ್ಲೇ ತಮ್ಮನ್ನು ತಾವು ಗುರುತಿಸಲ್ಪಡುವ ಅಪರೂಪದ ವ್ಯಕ್ತಿ ನಾಗರಾಜ್ ಯಾದವ್.

ದಿನ ಬೆಳಗಾದರೆ ಸಾಕು ಒಂದಿಲ್ಲೊಂದು ವಿಚಾರದಲ್ಲಿ ರಾಜ್ಯದ ಪ್ರತಿಷ್ಠಿತ ಟಿವಿ ಚಾನಲ್ ಗಳಲ್ಲಿ ಸಂದರ್ಶನದಲ್ಲಿ ಭಾಗಿಯಾಗುತ್ತಾ ತಮ್ಮಲ್ಲಿರುವ ಜ್ಞಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಮುಡಿಪಾಗಿಟ್ಟಿದ್ದಾರೆ‌. ಇದೇ ಕಾರಣಕ್ಕಾಗಿಯೇ ಅವರಿಗೆ ಕಾಂಗ್ರೆಸ್ ಪಕ್ಷ ಅವರನ್ನು ಮೇಲ್ಮನೆಗೆ ಕಳುಹಿದೆ. ಪ್ರಕಾರ ವಾಗ್ಮಿಯಾಗಿರುವ ನಾಗರಾಜ್ ಜಾಧವ್ ಅವರು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ‌. ಬಿಜೆಪಿ ಪಕ್ಷದವರಿಗೆ ತಕ್ಕ ಪ್ರತ್ಯುತ್ತರ ಕೊಡ್ತಾರೆ ಅನೋದಕ್ಕೆ ಅವರನ್ನ ಟಿವಿ ಡಿಬೇಟ್ ಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *