ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ ಪೂಜೆ ಮಾಡಿ,ಗಣೇಶ ಮೂರ್ತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸುವ ದೃಶ್ಯ ಕಣ್ಣಿಗೆ ಬಿತ್ತು ಕೆಲ ಹೊತ್ತು ಈ ದೃಶ್ಯವನ್ನು ನೋಡಿ ನಂಬಲು ಆಗಲಿಲ್ಲ ನನ್ನ ವಕ್ರದೃಷ್ಠಿ ಸರಿಮಾಡಿಕೊಂಡು ಮೊತ್ತೊಮ್ಮೆ ನೋಡಿದೆ ಆವಾಗ ನನಗೆ ಖಾತ್ರಿ ಆಯ್ತು ಇವರೇ ನಮ್ಮ ಬೆಳಗಾವಿ ಡಿಸಿ ಮಹ್ಮದ್ ರೋಷನ್ ಅಂತಾ…..

ಇವತ್ತು ಬೆಳಗಾವಿಯ ಚನ್ನಮ್ಮನ ವೃತ್ತದಲ್ಕಿರುವ ಗಣಪತಿ ಮಂದಿರದಲ್ಲಿ ಶ್ರೀಮತಿ ಅಂಕಿತಾ ಹಾಗು ಪುತ್ರ ಅಯಾನ್ ಜೊತೆ ಆಗಮಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ತಾವೇ ಖುದ್ದಾಗಿ ಗಣೇಶ್ ಮೂರ್ತಿಗೆ ಆರತಿ ಬೆಳಗಿ ಪೂಜೆ ನೆರವೇರಿಸಿ ಗಣೇಶ ಮೂರ್ತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ತಮ್ಮ ಸರ್ಕಾರಿ ಬಂಗಲೆಗೆ ತೆಗೆದುಕೊಂಡು ಹೋದರು.

ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.

ಇದು ಭಾರತ,ವಿವಿಧತೆಯಲ್ಲಿ ಏಕತೆ ಸಾರುವ ಅನೇಕ ಧರ್ಮೀಯರು ವಾಸ ಮಾಡುವ ಹೆಮ್ಮೆಯ ಭಾರತ ನಮ್ಮದು, ನಮ್ಮ ದೇಶದಲ್ಲಿ ಸಹೋದರತ್ವ,ಸಾಮರಸ್ಯ,ಬಾಂಧವ್ಯ ಇನ್ನುವರೆಗೆ ಜೀವಂತವಾಗಿವೆ ಹೀಗಾಗಿ ಈ ಬಾಂಧವ್ಯ ಸೂರ್ಯಚಂದ್ರ ಇರೋವರೆಗೂ ಜೀವಂತವಾಗಿರುತ್ತದೆ ಎನ್ನುವದಕ್ಕೆ ಬೆಳಗಾವಿ ಡಿಸಿ ಮಹ್ಮದ್ ರೋಷನ್ ಅವರ ಕೋಮುಸೌಹಾರ್ದತೆಯ ಸಂದೇಶವೇ ಇದಕ್ಕೆ ಸಾಕ್ಷಿ…

ಪರಿಸರ ಸ್ನೇಹಿ ಗಣೇಶ್ ಮೂರ್ತಿ

ಬೆಳಗಾವಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಪರಿಸರಸ್ನೇಹಿ ಗಣೇಶ ಮೂರ್ತಿಗೆ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಇರುವ ಗಣಪತಿ‌ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.
ನಂತರ ಪ್ರತಿವರ್ಷದಂತೆ ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಕುಟುಂಬ ಸಮೇತ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಪತ್ನಿ ಅಂಕಿತಾ, ಪುತ್ರ ಹಾಗೂ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *