ಬೆಳಗಾವಿ-ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಸಂಘಟಣೆಯೊಂದು ಪರಿಸರ ಸ್ನೇಹಿ ಗಣೇಶನ ಬಗ್ಗೆ ಪ್ರಮೋಟ್ ಮಾಡುವಂತೆ ಜಿಲ್ಲಾಧಕಾರಿಗಳಲ್ಲಿ ಮನವಿ ಮಾಡಿಕೊಳ್ಳಲು ಬಂದಿತ್ತು ಇದೇ ಸಂಧರ್ಭದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಜಿಲ್ಲಾಧಕಾರಿಗಳನ್ನು ಭೇಟಿಯಾಗಲು ಬಂದಿದ್ದರು ಈ ಸಂಧರ್ಭದಲ್ಲಿ ಮಹಿಳಾ ಸಂಘಟಣೆಯ ಪ್ರತಿನಿಧಿಗಳು ನಾವು ಪರಿಸರ ಪ್ರೇಮಿ ಗಣೇಶ ಮೂರ್ತಿಯನ್ನು ಸಿದ್ಧ ಪಡಿಸಿದ್ದೇವೆ ಗಣೇಶ ಮೂರ್ತಿಯಲ್ಲಿ ಬೀಜಗಳನ್ನು ಹಾಕಿದ್ದೇವೆ ಇದು ಪರಿಸರ ಪ್ರೇಮಿ ಗಣೇಶನ ಮೂರ್ತಿಯಾಗಿದೆ ಎಂದು ಡಿಸಿ ಸಾಹೇಬರಿಗೆ ಮಾಹಿತಿ ನೀಡುತ್ತಿರು ಈ ಸಂಧಭರ್ಭದಲ್ಲಿ ಮದ್ಯಪ್ರವೇಶಿಸಿದ ಡಿಸಿ ಸಾಹೇಬರು ಈ ಬಗ್ಗೆ ಪ್ರಕಾಶ ಹುಕ್ಕೇರಿ ಅವರಿಗೂ ಹೇಳಿ ಎಂದರು ಆಗ ಮಹಿಳಾ ಪ್ರತಿನಿಧಿಗಳು ಇಂಗ್ಲೀಷ್ ನಲ್ಲಿ ಫಟಾಫಟ್ ಮಾತನಾಡಿ ವೀ ಮೇಡ್ ಇಕೋ ಪ್ರೇಂಡ್ ಗಣೇಶ ಪ್ಲೀಜ್ ಪ್ರಮೋಟ್ ಹಿಮ್ ಎಂದರು ಆಗ ಪ್ರಕಾಶ ಹಕ್ಕೇರಿ ಸಾಹೇಬರು ಲಾಸ್ಟ ಟಾಯಿಮ್ ಹೈಟ್ ಗಣೇಶ ಟಚಿಂಗ್ ವಾಯರ್ ಪ್ರಾಬ್ಲಂ ನೋ ಹೈಟ್ ಗಣೇಶ ಅಂದ್ರು ಆಗ ಡಿಸಿ ಸಾಹೇಬ್ರು ಸೇರಿದಂತೆ ಎಲ್ಲರೂ ನಕ್ಕಿದ್ದೇ ನಕ್ಕಿದ್ದು.
ಮಹಿಳಾ ಸಂಘಟಣೆಯವರು ಹೈಟ್ ಗಣೇಶ ಮೂರ್ತಿಗಳ ಬಗ್ಗೆ ದೂರು ನೀಡಲು ಬಂದಿರಬಹುದೆಂದು ಭಾವಿಸಿ ಹೈಟ್ ಗಣೇಶ ಹೈಟ್ ಗಣೇಶ ಹೈಟ್ ವಾಯರ್ ಇನ್ಸಿಡೆಂಟ್ ಹ್ಯಾಪನ್ನ..ನೋ ಪ್ರಾಬ್ಲಂ ಥ್ಯಾಂಕ್ಯು…ಎಂದು ಪ್ರಕಾಶ ಹುಕ್ಕೇರಿ ಸಾಹೇಬರು ಹೊರ ನಡೆದರು
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …