Breaking News
Home / Breaking News / ಗೋಕಾಕಿನಲ್ಲಿ ಅಮೀತ ಷಾ ರೋಡ್ ಶೋ ಕಾಂಗ್ರೆಸ್ ನವರಿಂದ ಬೆದರಿಕೆ ಕರೆ- ಅಂಗಡಿ ಆರೋಪ

ಗೋಕಾಕಿನಲ್ಲಿ ಅಮೀತ ಷಾ ರೋಡ್ ಶೋ ಕಾಂಗ್ರೆಸ್ ನವರಿಂದ ಬೆದರಿಕೆ ಕರೆ- ಅಂಗಡಿ ಆರೋಪ

ಬೆಳಗಾವಿ
ಗೋಕಾಕನಲ್ಲಿ ಅಮಿತ ಶಾ‌ ಬರುತ್ತಾರೆ ಎಂದು ತಿಳಿದ ಕಾಂಗ್ರೆಸ್ ನವರಿಂದ ಬೇದರಿಕೆ‌ ಮೆಸೇಜ್ ಗಳು ಬರುತ್ತಿವೆ. ಜಿಲ್ಲಾ ಚುನಾವಣಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಗೋಕಾಕನಲ್ಲಿ‌ ಬೇರು ಬಿಟ್ಟಿರುವ ಪಿಡಿಒ, ತಹಶಿಲ್ದಾರ ಮೇಲೆ ನಿಗಾವಹಿಸಬೇಕೆಂದು ಸಂಸದ ಸುರೇಶ ಅಂಗಡಿ ಎಚ್ಚರಿಸಿದರು.
ಅವರು ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗೋಕಾಕನಲ್ಲಿ ಸರಕಾರಿ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣೆಯುತ್ತಿದ್ದಾರೆ. ಇವರು ಸರಕಾರಿ ನೌಕರರು ಪ್ರಭಾವಿ ನಾಯಕರ ಸೇವಕರೋ ಎಂದು ಹರಿಹಾಯ್ದ ಅವರು ಜಿಲ್ಲೆಯಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಏ.೧೩ ರಂದು ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ನಿಟ್ಟಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಅಮಿತ ಶಾ ಮೊದಲು ಕಿತ್ತೂರಿಗೆ ಆಗಮಿಸಿ ಕಿತ್ತೂರಿನ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಮುಧೋಳಕ್ಕೆ ತೆರಳಲಿದ್ದಾರೆ. ನಂತರ ಬೆಳಗಾವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ನಿಪ್ಪಾಣಿಯಲ್ಲಿ ಮಹಿಳಾ ಸಮಾವೇಶ ಹಾಗೂ ಗೋಕಾಕನಲ್ಲಿ ರೋಡ ಶೋ ನಡೆಸಲಿದ್ದಾರೆ‌ ಎಂದರು.

ದೆಹಲಿಯಲ್ಲಿ ಕಳೆದ 23 ದಿನಗಳಿಂದ ಸಂಸತ್ತನಲ್ಲಿ ಅನೇಕ ಗಂಭೀರ ವಿಷಯಗಳನ್ನು ಬಿಜೆಪಿ ಚರ್ಚಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಅದಕ್ಕೆ‌ ಕಿವಿಗೋಡದೆ ಪಾರ್ಲಿಮೆಂಟ್ ನ್ನು ಹಾಳಮಾಡಿದೆ ಎಂದು ಆರೋಪಿಸಿದರು.
ದೇಶದ ಬಡವರು, ರೈತರು, ನೀರಾವರಿ, ಆರ್ಥಿಕ, ಉದ್ಯೋಗ ಸಮಸ್ಯೆಗಳನ್ನು ಚರ್ಚೆ ಮಾಡುವ ವಿಷಯದ ಕುರಿತು ಚರ್ಚೆ ಮಾಡಿದರೆ ಕಾಂಗ್ರೆಸ್ ನ ಹುಳುಕು ಹೋರ ಬರುತ್ತದೆ ಎಂದು ಪಾರ್ಲಿಮೆಂಟ್ ಹಾಳು ಮಾಡಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಸಂಸದರು ದೇಶದ ಸಂಸದರು ಧರಣಿ ನಡೆಸಲು ನಿರ್ಧರಿಸಿದ್ದಾರೆ‌ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ‌ಮುಖಂಡರಾದ ರಾಜೇಂದ್ರ ಹರಕುಣಿ, ಅನಿಲ ಬೆನಕೆ, ಡಾ. ರವಿ ಪಾಟೀಲ, ಶ್ರೀನಿವಾಸ ಬಿಸನಕೊಪ್ಪ, ಎಂ.ಬಿ.ಜೀರಲಿ, ಆರ್ ಎಸ್ ಮುತಾಲಿಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *