Breaking News
Home / Breaking News / ಸಂಸದ ಅಂಗಡಿಯನ್ನು ಕಿಚಾಯಿಸಿದ ಸಿಎಂ

ಸಂಸದ ಅಂಗಡಿಯನ್ನು ಕಿಚಾಯಿಸಿದ ಸಿಎಂ

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಹೈಟೆಕ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಂಸದ ಸುರೇಶ್ ಅಂಗಡಿ ಅವರನ್ನು ಕಿಚಾಯಿಸಿದ ಘಟನೆ ನಡೆಯಿತು. ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಗೆ ರಾಜ್ಯ ಸರ್ಕಾರ ಪ್ರತಿಸತಃ 50 ರಷ್ಟು ಅನುದಾನ ನೀಡುತ್ತಿದೆ. ಆದರೆ ಈ ಯೋಜನೆಗಳಲ್ಲಿ ಕೇವಲ ನಿಮ್ಮ ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಹೆಸರು ಮಾತ್ರ ಪ್ರಸ್ತಾಪವಾಗಿರುತ್ತೆ. ರಾಜ್ಯ ಸರ್ಕಾರ ಅಥವಾ ರಾಜ್ಯದ ಮುಖ್ಯಮಂತ್ರಿಗಳ ಹೆಸರನ್ನು ನೀವು ಎಲ್ಲಿಯೂ ಬಳಸಿಕೊಂಡಿಲ್ಲ ಯಾಕೆ ? ಎಂದು ಸಿಎಂ ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರ ರೈತರ ಸಹಾಯಕ್ಕಾಗಿ ಫಸಲ್ ಭಿಮಾ ಯೋಜನೆಯನ್ನು ಜಾರಿ ಮಾಡಿದೆ. ಇದ್ಕಕೆ 50 ಪ್ರತಿಶತಃ ಅನುದಾನವನ್ನು ರಾಜ್ಯ ಸರ್ಕಾರವೇ ನೀಡುತ್ತಿದೆ. ಇದರಲ್ಲಿ ರಾಜ್ಯದ ಸಿಎಂ ಹೆಸರು ಅಥವಾ ರಾಜ್ಯ ಸರ್ಕಾರದ ಹೆಸರು ದಾಖಲಿಸಿಲ್ಲ. ಈ ಯೋಜನೆಗೆ ಪ್ರಧಾನಿ-ಮುಖ್ಯಮಂತ್ರಿ ಫಸಲ್ ಭಿಮಾ ಯೋಜನೆ ಎಂದು ಹೆಸರಿಟ್ಟರೆ ಅಡ್ಡಿ ಇಲ್ಲ. ಅದರಂತೆ  ಬೆಳಗಾವಿ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಬೆಳಗಾವಿ ಸ್ಮಾರ್ಟ್ ಆಗಲು ರಾಜ್ಯ ಸರ್ಕಾರದಿಂದಲೂ ಪ್ರತಿಶತಃ 50 ರಷ್ಟು ಅನುದಾನ ರಾಜ್ಯ ಸರ್ಕಾರದಿಂದ ಕೊಡುತ್ತೇವೆ.  ಆದರೆ ಇದರಲ್ಲೂ ರಾಜ್ಯ ಸರ್ಕಾರದ ಹೆಸರು ಬಂದಿಲ್ಲ. ಹಣ ನಮ್ಮದು ಪ್ರಚಾರ ನಿಮ್ಮದು ಎಂದರೆ ಹೇಗೆ ಸ್ವಾಮಿ ಎಂದು ಸಿಎಂ ಸಿ್ದದ್ರಾಮಯ್ಯ ಸಂಸದ ಸುರೇಶ್ ಅಂಗಡಿ ಅವರನ್ನು ನಗುತ್ತಲೇ ಕಾಲೆಳೆದರು.

ಇದನ್ನೆಲ್ಲ ಕೇಳಿಸಿಕೊಂಡ ಸಂಸದ ಸುರೇಶ್ ಅಂಗಡಿ ನಗುತ್ತಲೇ ಸುಮ್ಮನೆ ಕೂತಿದ್ದು ವಿಶೇಷವಾಗಿತ್ತು.

Check Also

ಕ್ರಿಕೆಟ್ ಆಟಗಾರ, ಅಶೀಶ್ ನೆಹ್ರಾ, ಬೆಳಗಾವಿಗೆ ಬಂದಿದ್ರು….!!

ಬೆಳಗಾವಿ-ದೇಶದ ಯಾವುದೇ ರಾಜ್ಯದ ಗಣ್ಯರು ಗೋವಾಕ್ಕೆ ಹೋಗಬೇಕಾದ್ರೆ ಬಹುತೇಕರು ಬೆಳಗಾವಿ ಮಾರ್ಗವಾಗಿಯೇ ಗೋವಾಕ್ಕೆ ಹೋಗ್ತಾರೆ,ಇವತ್ತು ಬೆಳಗ್ಗೆ ಟೀಂ ಇಂಡಿಯಾ ಕ್ರಿಕೆಟ್ …

Leave a Reply

Your email address will not be published. Required fields are marked *