ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಪುತ್ರ ಮೃಣಾಲ ಬರ್ತ್ ಡೇ ವಿಶ್ ಮಾಡಿದ್ದು ಹೀಗೆ…..!!!!

ಬೆಳಗಾವಿ- ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಜನುಮದಿನ ಅಭಿಮಾನಿಗಳು,ಬೆಂಬಲಿಗರು ಹಿತೈಷಿಗಳು, ಹಾಗು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಬ್ಬಾಳಕರ್ ನಿವಾಸಕ್ಕೆ ತೆರಳಿ ಜನುಮದಿನದ ಶುಭಾಶಯ ಕೋರುತ್ತಿದ್ದು ಹೆಬ್ಬಾಳಕರ್ ಪುತ್ರ ಮೃಣಾಲ ತಾಯಿಗೆ ಅಮ್ಮ ನೀನೇ ನನ್ನ ಜಗತ್ತು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಬರ್ತ್ ಡೇ ವಿಶ್ ಎಲ್ಲರ ಗಮನ ಸೆಳೆಯುತ್ತಿದೆ.

ಅವ್ವ ನೀನೇ ನನ್ನ ಶಕ್ತಿ,ನೀನೇ ನನಗೆ ಪ್ರೇರಣೆ,ನಿನ್ನ ಆಶೀರ್ವಾದವೇ ನನಗೆ ಶ್ರೀರಕ್ಷೆ,ನೀನೇ ನನ್ನ ಜಗತ್ತು ಎಂದು ಮೃಣಾಲ ಹೆಬ್ಬಾಳಕರ್ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಜನುಮ ದಿನದ ಶುಭಾಶಯ ಕೋರಿದ್ದಾರೆ.

ಬಾಲ್ಯದಿಂದಲೂ ಶ್ರೀಮಂತಿಕೆಯನ್ನು ಕಂಡಿರುವ ಮೃಣಾಲ ಒಳ್ಳೆಯ ಸಂಸ್ಕಾರ ಮೈಗೂಡಿಸಿಕೊಂಡಿದ್ದಾರೆ. ಅವರ ನಡೆ ಮತ್ತು ನುಡಿ ಎಲ್ಲರನ್ನು ಆಕರ್ಷಿಸುವದರಲ್ಲಿ ಯಾವುದೇ ಸಂದೇಹವಿಲ್ಲ. ಹಿರಿಯರನ್ನು ಅತ್ಯಂತ ವಿನಯದಿಂದ ಗೌರವಿಸುವ ಮೃಣಾಲ ತಾಯಿಯ ಕುರಿತು ಆಡಿರುವ ಮಾತುಗಳು ಎಲ್ಲರ ಗಮನ ಸೆಳೆಯುತ್ತಿವೆ.

ಮೃಣಾಲ ಹೆಬ್ಬಾಳಕರ್ ಮಾಡಿರುವ ಪೋಸ್ಟ್..

Happy Birthday, Mom! You are my strength, my inspiration, and my biggest blessing. Your love, kindness, and dedication touch so many lives, but for me, you are my world. Wishing you endless happiness, good health, and all the success you deserve

Mrinal hebbalkar

Check Also

ಗೋವಾದಲ್ಲಿ ಕರ್ನಾಟಕದ ವಲಸೆ ಕಾರ್ಮಿಕರಿಗೆ ರಕ್ಷಣೆ ಕೊಡಿ

ಪಣಜಿ: ಜೀವನೋಪಾಯಕ್ಕಾಗಿ ಉತ್ತರ ಕರ್ನಾಟಕ ಭಾಗದಿಂದ ಗೋವಾಕ್ಕೆ ಬರುವ ಕರ್ನಾಟಕದ ವಲಸೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಗೋವಾದ ಮುಖ್ಯಮಂತ್ರಿ …

Leave a Reply

Your email address will not be published. Required fields are marked *