ಬೆಳಗಾವಿ- ರಾಜ್ಯದಲ್ಲಿ ರಾಜಕೀಯವಾಗಿ ಬಲಾಡ್ಯವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟೆಕೆಗಳು ನಡೆಯುತ್ತಿವೆ.ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮೀ ಪುತ್ರ ಮೃನಾಲ ಹೆಬ್ಬಾಳಕರ್ ಹೆಸರು ಬಹುತೇಕ ಫೈನಲ್ ಆಗಿದ್ದು ಘೋಷಣೆ ಮಾತ್ರ ಬಾಕಿ ಇದೆ.ಚಿಕ್ಕೋಡಿಯಿಂದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಹೆಸರು ಚರ್ಚೆಯಲ್ಲಿದ್ದು ಬಹುತೇಕ ಅದು ಫೈನಲ್ ಆಗುವ ಲಕ್ಷಣಗಳು ಕಾಣಿಸುತ್ತಿವೆ.
ಇತ್ತ ಬಿಜೆಪಿಯಲ್ಲಿ ಕೇವಲ ಚರ್ಚೆ ನಡೆಯುತ್ತಿವೆ ಯಾರಿಗೆ ಟಿಕೆಟ್ ಸಿಗಬಹುದು ಎಂದು ಗುಣಾಕಾರ,ಭಾಗಾಕಾರ ಮಾಡಿದ್ರೂ ಲೆಕ್ಕ ಸಿಗುತ್ತಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಅಂಗಡಿ ಕುಟುಂಬದವರಿಗೆ ಸಿಗಬಹುದು, ಚೇಂಜ್ ಆದಲ್ಲಿ ಯಾರಿಗೆ ಅನ್ನೋದು ಫುಲ್ ಸಸ್ಪೆನ್ಸ್ ಇದೆ. ಈ ಕುರಿತು ಬಿಜೆಪಿ ನಾಯಕರಿಗೂ ಸ್ಪಷ್ಟತೆ ಇಲ್ಲ.ಹೀಗಾಗಿ ಬಿಜೆಪಿ ವಲಯದಲ್ಲಿ ಎಲ್ಕವೂ ನಿಗೂಢ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಸಾಹೇಬ್ ಜೊಲ್ಲೆ ಅವರೇ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗುತ್ತಿದ್ದು ಈ ಅಖಾಡಾದಲ್ಲಿ ರಮೇಶ್ ಕತ್ತಿ ಎಂಬ ಪವರ್ ಫುಲ್ ಪೈಲವಾಡ್ ಕಣದಲ್ಲಿ ಸೆಡ್ಡು ಹೊಡೆಯುತ್ತಿದ್ದು ಚಿಕ್ಕೋಡಿಯ ಬಿಜೆಪಿಯ ಕಣದಲ್ಲಿ ಕುಸ್ತಿ ನಡೆಯುತ್ತೋ ಅಥವಾ ಜೊಲ್ಲೆ ಅವರು ಮತ್ತೆ ಬಲ್ಲೆ,ಬಲ್ಲೆ ಅಂತಾರೋ ಕಾದು ನೋಡಬೇಕು.
ಮಾಜಿ ಸಂಸದ ರಮೇಶ್ ಕತ್ತಿ ಅವರು ನನಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದು ರಮೇಶ್ ಕತ್ತಿ ಅವರಿಗೆ ಈ ಬಾರಿಯೂ ಬಿಜೆಪಿ ಟಿಕೆಟ್ ತಪ್ಪಿದ್ರೆ ಅವರ ಮುಂದಿನ ನಡೆ,ಯಾವ ಕಡೆ ಎನ್ನುವ ವಿಚಾರ ತೀವ್ರ ಕುತೂಹಲ ಕೆರಳಿಸಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಮೃನಾಲ ಹೆಬ್ಬಾಳಕರ್ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಜೊತೆ ಈಗಾಗಲೇ ಟೆಂಪಲ್ ರನ್ ಶುರು ಮಾಡಿದ್ದು ದೂರವಾಣಿ ಮೂಲಕ ನಾಯಕರನ್ನು ಸಂಪರ್ಕಿಸಿ ನಿಮ್ಮ ಸಪೋರ್ಟ್ ನಮಗೆ ಬೇಕು ಎನ್ನುವ ಮಂತ್ರ ಜಪಿಸುತ್ತಿದ್ದಾರೆ, ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭಿಸಿದೆ.
ಒಟ್ಟಾರೆ ಬೆಳಗಾವಿ ಪಾಲಿಟೀಕ್ಸ್ ಯಾರ ತಲೆಗೂ ಹತ್ತುತ್ತಿಲ್ಲ ಎಲ್ಲಿ ಏನು ನಡೆಯುತ್ತಿದೆ ಯಾರಿಗೂ ಅರ್ಥವಾಗುತ್ತಿಲ್ಲ ಕರಿಮಣಿ ಮಾಲೀಕ ನಾನಲ್ಲ ಎನ್ನುವ ಪರಿಸ್ಥಿತಿ ಬೆಳಗಾವಿ ಜಿಲ್ಲೆಯಲ್ಲಿ ಇರುವುದು ಸತ್ಯ.