Breaking News

ವರ್ಕರ್ ಮುರಿಗೆಪ್ಪ ಸಂಬಣ್ಣವರ ಇನ್ನಿಲ್ಲ.

ಎಂ.ಕೆ ಹುಬ್ಬಳ್ಳಿ- ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಕಿತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡುವ ಮೂಲಕ ವರ್ಕರ್ ಎಂ.ಟಿ ಸಂಬಣ್ಣವರ ಎಂದೇ ಪ್ರಸಿದ್ದಿಯಾಗಿದ್ದ ಮುರಿಗೆಪ್ಪ ಸಂಬಣ್ಣವರ ಇಂದು ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ.

ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ರಾತ್ರಿ ಲಿಂಗೈಕ್ಯರಾಗಿದ್ದು ಅವರ ಅಂತ್ಯಕ್ರಿಯೆ ನಾಳೆ ಮಂಗಳವಾರ ಬೆಳಗ್ಗೆ 9-00 ಗಂಟೆಗೆ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ನೆರವೇರಲಿದೆ.

ಎಂ.ಟಿ ಸಂಬಣ್ಣವರ ಅವರು ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡುವ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿದ್ದರು. ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ ಅಪ್ಪಟ ಶಿಷ್ಯರಾಗಿದ್ದ ಮುರಿಗೆಪ್ಪ, ಶಿವಾನಂದ ಕೌಜಲಗಿ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಕಿತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ್ದರು.

ಕಿತ್ತೂರು ಕ್ಷೇತ್ರದಿಂದ ಮುರಿಗೆಪ್ಪ ಸಂಬಣ್ಣವರ ಅವರನ್ನು ಬಿಜೆಪಿ ಅಭ್ಯರ್ಥಿನ್ನಾಗಿಸಲು ಬಿಜೆಪಿ ನಿರ್ಧರಿಸಿತ್ತು ಆದ್ರೆ ಚುನಾವಣೆಯ ಸಂಧರ್ಭದಲ್ಲಿ ಎಸ್ ಬಂಗಾರಪ್ಪ ಅವರು ಬಿಜೆಪಿ ಸೇರ್ಪಡೆಯಾದ ಕಾರಣ ಬಂಗಾರಪ್ಪನವರ ಶಿಷ್ಯರಾಗಿದ್ದ ಸುರೇಶ ಮಾರಿಹಾಳ ಅವರಿಗೆ ಬಿಜೆಪಿ ಟಿಕೆಟ್ ಲಭಿಸಿಸಿತ್ತು ಕೊನೆಯ ಕ್ಷಣದಲ್ಲಿ ಮುರಿಗೆಪ್ಪನವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಮುರಿಗೆಪ್ಪ ಸಂಬಣ್ಣವರ ನಿಧನಕ್ಕೆ ಗಣ್ಯರು ತೀವ್ರಶೋಕ ವ್ಯಕ್ತಪಡಿಸಿದ್ದು,ಕಿತ್ತೂರು ಕ್ಷೇತ್ರ ಅಭಿವೃದ್ಧಿಯ ಹರಿಕಾರನನ್ನು ಕಳೆದುಕೊಂಡಂತಾಗಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *