ಬೆಳಗಾವಿ- ನೆತ್ತಿಗೆ ಜ್ವರ ಏರಿ ಅಸ್ವಸ್ಥಳಾದ ಮಹಿಳೆಯನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹೃದಯ ಮಿಡಿತ ಬಂದ್ ಆಗಿದೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಖಾಸಗಿ ಆಸ್ಪತ್ರೆಯಲ್ಲಿ ಘೋಷಣೆ ಮಾಡಿದ ನಂತರ ಶವ ವಾಗಿ ಮನೆಗೆ ಹೋದ ಮಹಿಳೆ ಮನೆಯಲ್ಲಿ ಜೀವಂತವಾದ ಅಚ್ಚರಿಯ ಘಟನೆ ಬೆಳಗಾವಿ ತಾಲ್ಲೂಕಿನ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ.
ಮುಚ್ಚಂಡಿ ಗ್ರಾಮದ ಸಿದ್ದೇಶ್ವರ ನಗರದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ ಮುಚ್ಚಂಡಿ ಗ್ರಾಮದ ,ಮಾಲು ಯಲ್ಲಪ್ಪ ಚೌಗಲೇ 55 ಎಂಬ ಮಹಿಳೆಯನ್ನು ನೆತ್ತಿಗೆ ಜ್ವರ ಏರಿ ಅಸ್ವಸ್ಥಳಾದ ಕಾರಣ ಇಂದು ಬುಧವಾರ ಮದ್ಯಾಹ್ನ ಬೆಳಗಾವಿಯ ಕಿಲ್ಲಾ ಕೆರೆಯ ಪಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆಸ್ಪತ್ರೆಯಲ್ಲಿ ಮೂರು ಘಂಟೆಗಳ ಕಾಲ ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದರು.
ಮದ್ಯಾಹ್ನ ಮೂರು ಘಂಟೆ ಸುಮಾರಿಗೆ ವೈದ್ಯರು ಮಹಿಳೆಯ ಸಮಂಧಿಕರನ್ನು ಕರೆದು ಮಹಿಳೆಯ ಹೃದಯ ಬಡಿತ ನಿಂತು ಹೋಗಿದೆ, ಮಹಿಳೆ ಉಸಿರಾಡುತ್ತಿಲ್ಲ ,ಮಹಿಳೆ ಮೃತಪಟ್ಟಿದ್ದು ಶವ ತೆಗೆದುಕೊಂಡು ಹೋಗಿ ಎಂದು ವೈದ್ಯರು ಹೇಳಿ ಕಳಿಸಿದ್ದರು
ವೈದ್ಯರ ಹೇಳಿಕೆಯಿಂದ ದುಖದಲ್ಲಿ ಮುಳಗಿದ್ದ ಮಹಿಳೆಯ ಕುಟುಂಬದವರು ತಮ್ಮ ಸಮಂಧಿಕರಿಗೆ ಫೋನ್ ಮಾಡಿ ಮಾಲು ಮೃತ ಪಡ್ಟುದ್ದಾಳೆ ಎಂದು ಹೇಳಿ ಮಾಲು ಅವಳ ಶವ ವನ್ನು ಮುಚ್ಚಂಡಿಗೆ ತಂದಿದ್ದರು
ಮಾಲು ಅವಳ ಶವ ಮುಚ್ಚಂಡಿಗೆ ತರುವಷ್ಟರಲ್ಲಿ ಹಲಗಾ ಗ್ರಾಮದ ಸಮಂಧಿಕರು ಟಿಂಪೋ ತುಂಬಿಕೊಂಡು ಮುಚ್ಚಂಡಿಗೆ ಆಗಮಿಸಿದ್ರು
ಕೆಲ ಸಮಂಧಿಕರು ಯಲ್ಲಮ್ಮಾ ದೇವಿಯ ದರ್ಶನಕ್ಕೆಂದು ಸವದತ್ತಿಗೆ ತೆರಳಿದ್ದರು ಮಾಲು ಸಾವಿನ ಸುದ್ಧಿ ಕೇಳಿ ಅವರು ಮಾರ್ಗದ ಮದ್ಯದಿಂದಲೇ ಮುಚ್ಚಂಡಿಗೆ ವಾಪಸ್ಸಾದ್ರು
ಮುಚ್ಚಂಡಿ ಗ್ರಾಮದಲ್ಲಿ ಮಾಲು ಚೌಗಲೇಯ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಲ್ಲ ಸಮಂಧಿಕರು ಮುಚ್ಚಂಡಿ ಗ್ರಾಮ ತಲುಪಿದ್ದರು ಮಾಲು ಶವದ ಎದುರು ಅಳುವ ಗದ್ದಲ ಹೆಚ್ಚಾಗುತ್ತಿದ್ದಂತೆಯೇ ಮಾಲು ಕಣ್ಣು ಬಿಟ್ಟು ಎದ್ದು ಕುಂತಾಗ ಅಲ್ಲಿ ಸೇರಿದ ಜನರಿಗೆ ಏನಾಗಿರಬಹುದು ಅಲ್ಲವೇ
ಸಮಂಧಿಕರು ಕಣ್ಣು ಬಿಟ್ಟು ಎದ್ದು ಕುಳಿತ ಮಾಲುಗೆ ಹಾಲು ಕುಡಿಸಿ ಮಲಗಿಸಿದ್ರು ಅಂತ್ಯಕ್ರಿಯೆಗೆ ಬಂದ ಜನ ದಂಗಾದ್ರು ಕೆಲವರು ವೈದ್ಯರ ಬೇಜವಾಬ್ದಾರಿಯ ಕುರಿತು ಹಿಡಿಶಾಪ ಹಾಕಿದ್ರೆ ಇನ್ನು ಕೆಲವರು ಇದೆಲ್ಲಾ ದೇವಿ ಯಲ್ಲಮ್ಮನ ಪವಾಡ ಅಂದ್ರು