ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಐತಿಹಾಸಿಕ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು ಈಗ ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಲಿದೆ
ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಹನ್ನೊಂದು ತಾಲ್ಲೂಕುಗಳ ಇದ್ದು ಜಲ್ಲೆಯ ನಿಪ್ಪಾಣಿ ಮತ್ತು ಕಾಗವಾಡ ತಾಲ್ಲೂಕಿನ ಸ್ಥಾನಮಾನ ಪಡೆದಿದ್ದು ಬೆಳಗಾವಿ ಜಿಲ್ಲೆ ಈಗ ಒಟ್ಟು ಹದಿಮೂರು ತಾಲ್ಲೂಕು ಗಳನ್ನು ಹೊಂದಿರುವ ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಲಿದೆ
ಸರ್ಕಾರ ಈ ಹಿಂದೆ ಹೊರಡಿಸಿದ ಗೆಜೆಟ್ ದಲ್ಲಿ ಗೋಕಾಕ ತಾಲ್ಲೂಕಿನ ಮೂಡಲಗಿ ಗ್ರಾಮವೂ ಹೊಸ ತಾಲ್ಲೂಕುಗಳ ಪಟ್ಟಿಯಲ್ಲಿ ಇತ್ತು ಆದ್ರೆ ಗುರುವಾರ ಸರ್ಕಾರ ಹೊರಡಿಸಿದ ಪರಿಷ್ಕೃತ ಆದೇಶದಲ್ಲಿ ಮೂಡಲಗಿ ಗ್ರಾಮದ ಹೆಸರು ಕೈಬಿಟ್ಟಿರುವದರಿಂದ ಮೂಡಲಗಿಯಲ್ಲಿ ಹೋರಾಟ ಕಾವು ಪಡೆದುಕೊಂಡಿದೆ
ಮೂಡಲಗಿ ವಾಣಿಜ್ಯ ನಗರಿಯಾಗಿದ್ದು ಇದು ತಾಲ್ಲೂಕು ಆಗಲೇಬೇಕು ಎಂದು ಇಲ್ಲಿಯ ಜನ ಹಲವಾರು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದು ಸರ್ಕಾರದ ಪರಿಷ್ಕೃತ ಆದೇಶದಿಂದ ಮೂಡಲಗಿ ತಾಲ್ಲೂಕಿನ ಹೋರಾಟಗಾರರಿಗೆ ಆಘಾತವಾಗಿದ್ದು ಮೂಡಲಗಿ ತಾಲ್ಲೂಕು ಮಾಡುವಂತೆ ಆಗ್ರಹಿಸಿ ಇಂದು ಮೂಡಲಗಿಯಲ್ಲಿ ಪಕ್ಷಾತೀತ ಹೋರಾಟ ನಡೆಯುವ ಸಾಧ್ಯತೆ ಇದೆ
ಒಟ್ಟಾರೆ ಬೆಳಗಾವಿ ಗಡಿ ಭಾಗದ ನಿಪ್ಪಾಣಿ ನಡು ಭಾಗದ ಕಾಗವಾಡ ಹೊಸ ತಾಲ್ಲೂಕುಗಳಾಗುತ್ತಿದ್ದು ಈ ಭಾಗದ ಜನರಿಗೆ ಸಂತಸ ತಂದಿದೆ