ಮೂಡಲಗಿ ತಾಲ್ಲೂಕು ಹೋರಾಟ ಕೊನೆಗೂ” J ‘ ಕಂಪನಿ ಗೆ..ಜೈ…!
ಬೆಳಗಾವಿ- ಮೂಡಲಗಿ ತಾಲ್ಲೂಕು ಘೋಷಣೆಯ ವಿಷಯದಲ್ಲಿ ಗೋಕಾಕ ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ರಾಜಕೀಯ ಸಂಘರ್ಷ ನಡೆದು ಕೊನೆಗೂ ಈ ವಿಷಯ ಈಗ ತಾರ್ಕಿಕ ಅಂತ್ಯ ಕಂಡಿದೆ
ರಾಜ್ಯ ಸರ್ಕಾರ ಬುಧವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮೂಡಲಗಿಗೆ ತಾಲ್ಲೂಕಿನ ಪಟ್ಟ ನೀಡಿದ್ದು ಈ ವಿಷಯದಲ್ಲಿ ಜಾರಕಿಹೊಳಿ ಕಂಪನಿಗೆ ಜಯ ಸಿಕ್ಕಿದೆ
ಮೂಡಲಗಿ ತಾಲ್ಲೂಕು ಘೋಷಣೆಯನ್ನು ರಾಜ್ಯ ಸರ್ಕಾರ ತಡೆ ಹಿಡಿದ ಬಳಿಕ ಜಾರಕಿಹೊಳಿ ವಿರೋಧಿಗಳು ಸೇರಿಕೊಂಡು ಈ ವಿಷಯದಲ್ಲಿ ಜಾರಕಿಹೊಳಿ ಸಹೋದರರು ಅನ್ಯಾಯ ಮಾಡಿದ್ದಾರೆ ಎಂದು ಅಂದಿನಿಂದ ಇಂದಿನವರೆಗೆ ಮೂಡಲಗಿಯಲ್ಲಿ ದೊಡ್ಡ ಹೋರಾಟ ಮಾಡಿದ್ದರು
ಗೋಕಾಕ ತಾಲ್ಲೂಕಿನ ಕೆಲವು ಗ್ರಾಮಗಳು ಮೂಡಲಗಿಗೆ ಹೋದರೆ ಗೋಕಾಕ ತಾಲ್ಲೂಕಿಗೆ ಅನ್ಯಾಯ ಆಗುತ್ತದೆ ಅದಕ್ಕೆ ಸಚಿವ ಸಂಪುಟದ ಸಭೆಯಲ್ಲಿ ತಡೆ ಹಿಡಿದಿದ್ದು ನಾನೇ ಎಂದು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಯಾವುದೇ ಸಂಕೋಚ ಇಲ್ಲದೇ ಬಹಿರಂಗವಾಗಿ ಹೇಳಿಕೊಂಡಿದ್ದರು
ಈ ವಿಷಯದಲ್ಲಿ ಕೆಲವು ತಪ್ಪು ಗಳಾಗಿವೆ ಅದು ಸರಿಯಾದರೆ ಮೂಡಲಗಿ ತಾಲ್ಲೂಕು ಆಗೋದಕ್ಕೆ ನನ್ನ ವಿರೋಧ ಇಲ್ಲ ಅಂತಾ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸುದ್ದರು
ಮೂಡಲಗಿ ತಾಲ್ಲೂಕು ಮಾಡುವ ವಿಷಯದಲ್ಲಿ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿಯನ್ನು ತಾಲ್ಲೂಕು ಮಾಡಿಸಿಯೇ ತೀರುತ್ತೇನೆ ಈ ವಿಷಯದಲ್ಲಿ ರಾಜಕೀಯ ಮಾಡುವದು ಸರಿಯಲ್ಲ ತಮ್ಮ ಪ್ರಾಣ ಕೊಟ್ಟಾದರೂ ಮೂಡಲಗಿಗೆ ತಾಲ್ಲೂಕಿನ ಸ್ಥಾನ ಮಾನ ಕೊಡಿಸುವದಾಗಿ ಭರವಸೆ ನೀಡಿದ್ದ ಬಾಲಚಂದ್ರ ರಾಜಧಾನಿ ಬೆಂಗಳೂರಿನಲ್ಲಿ ಉಳಿದುಕೊಂಡು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಮೂಡಲಗಿಗೆ ತಾಲ್ಲೂಕಿನ ಸ್ಥಾನಮಾನ ಕೊಡಿಸಿ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ತಾಲ್ಲೂಕಿನ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸುವದರಲ್ಲಿ ಯಶಸ್ವಿಯಾಗಿದ್ದಾರೆ
ಮೂಡಲಗಿ ತಾಲ್ಲೂಕು ಆಗೋದು ಗ್ಯಾರಂಟಿ ಎಂದು ಜಾರಕಿಹೊಳಿ ಕಂಪನಿ ವಾರಂಟಿ ಕೊಟ್ಟರೂ ಮೂಡಲಗಿಯಲ್ಲಿ ಹೋರಾಟ ಮುಂದುವರೆದಿತ್ತು ಹೋರಾಟಗಾರರು ಹಾಗು ಜಾರಕಿಹೊಳಿ ಸಹೋದರರ ನಡುವೆ ಆರೋಪ ಪ್ರತ್ಯಾರೋಪ ನಡೆದಿತ್ತು
ಆದರೆ ಕೊನೆಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂಡಲಗಿಗೆ ತಾಲ್ಲೂಕಿನ ಪಟ್ಟ ಸಿಕ್ಕಿದ್ದು ಸಂತಸದ ವಿಷಯ ಸರ್ಕಾರ ಹೋರಾಟಗಾರರ ಹೋರಾಟಕ್ಕೆ ಸ್ಪಂದಿಸುವ ಜೊತೆಗೆ ಬಾಲಚಂದ್ರ ಜಾರಕಿಹೊಳಿ ಅವರ ಒತ್ತಡಕ್ಕೆ ಮಣಿದಿದ್ದು ಈ ವಿಷಯದಲ್ಲಿ J ಕಂಪನಿ ವಿಜಯ ಸಾಧಿಸಿದ್ದಂತು ಸತ್ಯ