Breaking News

ಮುಳವಾಡಮಠ ರಾಜಕೀಯ ಭವಿಷ್ಯಕ್ಕೆ “ಬೆಳಗಾವಿ ಉತ್ತರ”

 

ಬೆಳಗಾವಿ-ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರ ಅಗಣಿತ ರಾಜಕೀಯ ನಾಯಕರ ಭವಿಷ್ಯ ರೂಪಿಸುವ ಕ್ಷೇತ್ರವಾಗಿ ಪರಿವರ್ತನೆ ಆಗಿದೆ ಬೆಳಗಾವಿಯ ಪ್ರಸಿದ್ಧ ನ್ಯಾಯವಾದಿ ಜನನಾಯಕ ಎಜಿ ಮುಳವಾಡಮಠ ಅವರು ತಮ್ಮ ರಾಜಕೀಯ ಭವಿಷ್ಯಕ್ಕೆ ಬೆಳಗಾವಿ ಉತ್ತರದಲ್ಲಿ ಉತ್ತರ ಕಂಡುಹಿಡಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ
ಬಿಜೆಪಿಯ ” ಬಿ” ಫಾರ್ಮ ಪಡೆದು ಬೆಳಗಾವಿ ಉತ್ತರ ಮತಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಅವರ ಅಭಿಮಾನಿಗಳು ದುಂಬಾಲು ಬಿದ್ದಿರುವ ಕಾರಣ ಎಜಿ ಮುಳವಾಡಮಠ ಅವರು ಈ ಬಾರಿಯ ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ
ಅಕ್ಟೋಬರ್ 16 ರಂದು ಮುಳವಾಡಮಠ ಅವರ ಹುಟ್ಟುಹಬ್ಬವನ್ನು ಅವರ ಸಾವಿರಾರು ಅಭಿಮಾನಿಗಳು ನಗರದ ಗಾಂಧೀ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಬೆಳಗಾವಿ ಉತ್ತರದಿಂದ ಮುಳವಾಡಮಠ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಸಂದೇಶವನ್ನು ಬಿಜೆಪಿ ನಾಯಕರಿಗೆ ಕಳುಹಿಸಲಿದ್ದಾರೆ
ಬೆಳಗಾವಿ ಉತ್ತರದಿಂದ ಟಿಕೆಟ್ ಪಡೆಯಲು ಅದೆಷ್ಟು ಆಕಾಂಕ್ಷಿಗಳು ಲಾಭಿ ನಡೆಸಿದ್ದಾರೆ ಕೆಲವರು ಟಿಕೆಟ್ ನನಗೆ ಸಿಗೋದು ಗ್ಯಾರಂಟಿ ಅಂತ ಈಗಾಗಲೇ ಉತ್ತರದಲ್ಲಿ ಪ್ರಚಾರ ಶುರು ಮಾಡಿದ್ದಾರೆ
ಕಿರಣ ಜಾಧವ,ಅನೀಲ ಬೆನಕೆ,ರಾಜೀವ ಟೋಪಣ್ಣವರ,ವಿರೇಶ ಕಿವಡಸಣ್ಣವರ,ಡಾ ರವಿ ಪಾಟೀಲ,ಸೇರಿದಂತೆ ಹಲವಾರು ಜನ ನಾಯಕರು ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯಲು ಎಲ್ಲಿಲ್ಲದ ಕಸರತ್ತು ನಡೆಸಿದ್ದು ಮುಳವಾಡಮಠ ಅವರ ರಾಜಕೀಯ ಸ್ಪರ್ದೆ ಬಿಜೆಪಿ ಆಕಾಂಕ್ಷಿಗಳ ನಿದ್ದೆಕೆಡಿಸಿದರೆ ಕಾಂಗ್ರೆಸ್ ವಲಯದಲ್ಲಿ ಶಾಕಿಂಗ್ ಸುದ್ಧಿಯಾಗಿದೆ
ಎಜಿ ಮುಳವಾಡಮಠ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದು ಘಟಾನುಘಟಿ ನಾಯಕರ ಜೊತೆ ಸಂಪರ್ಕ ಹೊಂದಿದ್ದು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ

Check Also

ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ

ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.