ಬೆಳಗಾವಿ-ಚಾಕುವಿನಿಂದ ಕತ್ತು ಕೋಯ್ದು ಪತ್ನಿ ಕೊಂದ ಪಾಪಿ ಪತಿ,ಪೋಲೀಸ್ ಠಾಣೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿ ಕೊಂದು ಸವದತ್ತಿ ಠಾಣೆಗೆ, ಆರೋಪಿ ಪತಿ ಶರಣಾಗಿದ ಘಟನೆ,ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.
ಅಯ್ಯಪ್ಪಸ್ವಾಮಿ ನಗರದಲ್ಲಿ ಪತ್ನಿ ಶಬಾನಾ(28) ಹತ್ಯೆಗೈದ ಆರೋಪಿ ಮೆಹಬೂಬ್ ಸಾಬ್ ಪತ್ನಿಯ ಹತ್ಯೆ ಮಾಡಿದ ಬಳಿಕ ನೇರವಾಗಿ ಪೋಲೀಸ್ ಠಾಣೆಗೆ ಹಾಜರಾಗಿದ್ದಾನೆ.ಬೀಡಿ ಗ್ರಾಮದ ಶಬಾನಾ ಜೊತೆ ಮುನವಳ್ಳಿ ನಿವಾಸಿ ಮೆಹಬೂಬ್‌ಸಾಬ್ ವಿವಾಹವಾಗಿತ್ತು.
ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದ ದೂರವಾಗಿದ್ದ ಶಬಾನಾ ಇಂದು ಪತಿಯಿಂದಲೇ ಹತ್ಯೆಯಾಗಿದ್ದಾಳೆ.ತನ್ನ ಒಂಬತ್ತು ವರ್ಷದ ಮಗ, ಆರು ವರ್ಷದ ಮಗಳ ಜೊತೆ ಪ್ರತ್ಯೇಕವಾಗಿ ವಾಸವಿದ್ದ ಶಬಾನಾ ನನ್ನು ಮೆಹಬೂಬ್ ಸಾಬ್ ಇವತ್ತು ಬರ್ಬರವಾಗಿ ಹತ್ಯೆಮಾಡಿದ್ದಾನೆ.
ಇಂದು ಬೆಳಗ್ಗೆ ಮನೆಗೆ ಆಗಮಿಸಿ ಶಬಾನಾ ಜೊತೆ ಪತಿ ಮೆಹಬೂಬ್‌ಸಾಬ್ ಗಲಾಟೆ ಮಾಡಿದ್ದು,ಬಳಿಕ ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದು ಪೊಲೀಸ್ ಠಾಣೆಗೆ ಶರಣಾಗಿದ್ದು,ಶಬಾನಾ ಕುಟುಂಬಸ್ಥರ ಆಗಮನಕ್ಕಾಗಿ ಪೋಲೀಸರು ಕಾಯುತ್ತಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ