ಬೆಳಗಾವಿ-ರಾತ್ರಿ ಮಲಗಿದ್ದಾಗ ಪಕ್ಕದಲ್ಲೇ ಮಲಗಿದ್ದ ಗಂಡನ ಕತ್ತು ಹಿಸುಕಿ .ಕೊಲೆ ಮಾಡಿದ ಹೆಂಡತಿ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾಳೆ.
ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಬಳಿಕ ಕತ್ತು ಹಿಸುಕಿ ಗಂಡನ ಕೊಲೆ ಮಾಡಿಬಳಿಕ ಸಹಜ ಸಾವು ಎಂದು ಕಥೆ ಕಟ್ಟಿದ್ದ ಐನಾತಿ ಹೆಂಡತಿಯ ಬಣ್ಣ ಬಯಲಾಗಿದೆ.ಬಾಬು ಕಲ್ಲಪ್ಪ ಕರ್ಕಿ(೪೮) ಮೃತ ದುರ್ದೈವಿಯಾಗಿದ್ದಾನೆ.
ಮಹಾದೇವಿ ಬಾಬು ಕರ್ಕಿ ಗಂಡನನ್ನ ಕೊಲೆ ಮಾಡಿದ ಹೆಂಡತಿ.ಈ ಘಟನೆ ನಡೆದಿದ್ದುಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ .
ಕುಡಿದು ಬಂದು ಗಲಾಟೆ ಮಾಡ್ತಿದ್ದ, ಜಮೀನು ಮಾರಾಟಕ್ಕೆ ಮುಂದಾಗಿದ್ದ ಗಂಡನಿಗೆ ಮೊದಲು ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ನಿದ್ದೆ ಹತ್ತಿದ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಕೊಲೆ ಮಾಡಿ ಪೊಲೀಸರ ಮುಂದೆ ಎರಡೆರಡು ಕಥೆ ಕಟ್ಟಿದ್ದ ಐನಾತಿ ಮಹಾದೇವಿ.ಬಚಾವ್ ಆಗಲು ಪ್ರಯತ್ನ ಮಾಡಿದ್ದಳು.ಕತ್ತಿನ ಮೇಲಿನ ಗಾಯ ನೋಡಿ ಅನುಮಾನಗೊಂಡು ಪೊಲೀಸರು ತನಿಖೆ ಮಾಡಿದ್ದಾರೆ. ತನಿಖೆಯಲ್ಲಿ ಮಹಾದೇವಿಯ ಮಸಲತ್ತು ಬಟಾಬಯಲಾಗಿದೆ.
ಮೊದಲು ಸಜಹ ಸಾವು,ಎಂದಿದ್ದಳು ತನಿಖೆ ಆರಂಭ ಆಗ್ತಿದ್ದಂತೆ ಅಸಹಜ ಸಾವು ಕಥೆ ಹೇಳಿದ್ದಾಳೆ.ನಂದಘಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಂಡತಿ ಮಹಾದೇವಿ ಅರೆಸ್ಟ್ ಆಗಿದ್ದಾಳೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
