ಬೆಳಗಾವಿ-ತನ್ನ ಹೆಂಡತಿ ಬೇರೊಬ್ಬನ ಜೊತೆ ಬೈಕ್ ಮೇಲೆ ಹೊರಟಿದ್ದನ್ನು ಗಮನಿಸಿದ ಗಂಡ ಇಬ್ಬರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಓರ್ವನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕುಲಗೋಡ ಠಾಣಾ ವ್ಯಾಪ್ತಿಯ ಲಕ್ಷ್ಮೇಶ್ವರ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಮೌಲಾಸಾಬ್ ಮೋಮೀನ್ ಎಂಬಾತ, ಅಮೋಘ ಢವಳೇಶ್ವರನ ಹೆಂಡತಿಯಾತ ಶಿಲ್ಪಾ ಜೊತೆ ಬೈಕ್ ಮೇಲೆ ಹೊರಟಿದ್ದನ್ನು ಗಮನಿಸಿದ ಅಮೋಘ ಢವಳೇಶ್ವರ, ಬೈಕ್ ಮೇಲೆ ಹೊರಟಿದ್ದ ಮೌಲಾಸಾಬ್ ಮತ್ತು ಶಿಲ್ಪಾ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ಮೌಲಾಸಾಬ್ ಮೋಮೀನ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು ಶಿಲ್ಪಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಶಿಲ್ಪಾ ಜೊತೆ ಬೈಕ್ ಮೇಲೆ ಹೊರಟಿದ್ದ ಮೌಲಾಸಾಬ್ ಎಂಬಾತನ ಮೇಲೆ ದಾಳಿ ಮಾಡಿ,ಹಲ್ಲೆ ಮಾಡಿ ಮೌಲಾಸಾಬ್ ನ ಕೊಲೆ ಮಾಡಿದ ಆರೋಪಿ,ಶಿಲ್ಪಾಳ ಗಂಡ ಅಮೋಘ ಢವಳೇಶ್ವರನನ್ನು ಬಂಧಿಸಿದ್ದಾರೆ. ಮುಂದಿನ ತನಿಖೆ ಆರಂಭಿಸಿದ್ದಾರೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					