Breaking News

ಮಿಂಡನ ಜೊತೆ ಸೇರಿ ಗಂಡನನ್ನೇ ಖತಂ ಮಾಡಿದ ಖಿಲಾಡಿ ಪತ್ನಿ…!!

 ನಿನ್ನೆ ಶವ ಪತ್ತೆ ಇವತ್ತು ಆರೋಪಿಗಳ ಪತ್ತೆ…!!

ಬೆಳಗಾವಿ-ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದ ಪತ್ನಿಯ ಜೊತೆಗೆ ಪ್ರಿಯಕರನನ್ನು ಬಂಧಿಸಲಾಗಿದೆ.ಕಟಕೋಳ ಠಾಣೆ ಪೊಲೀಸರಿಂದ ಪತ್ನಿ, ಆಕೆಯ ಪ್ರಿಯಕರನ ಬಂಧನವಾಗಿದೆ.ಹೊಸೂರು ಪೂಲ್ ಬಳಿ ನಿನ್ನೆ ಪತ್ತೆಯಾಗಿದ್ದ ಪಾಂಡಪ್ಪ ಜಟಕನ್ನವರ (35) ಶವ ಪತ್ತೆಯಾಗಿತ್ತು.ಇವತ್ತು ಬೆಳಗಾಗುವಷ್ಟರಲ್ಲಿ ಆರೋಪಿಗಳೂ ಪತ್ತೆಯಾಗಿದ್ದಾರೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಶವ ಸಿಕ್ಕತ್ತು.ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಕಟಕೋಳ ಪೊಲೀಸರು 24 ಗಂಟೆಯೊಳಗಾಗಿ ಪ್ರಕರಣ ಭೇದಿಸಿದ್ದಾರೆ.ಕೃಷಿ ಉಪಕರಣದಿಂದ ಪಾಂಡಪ್ಪ ಜಟಕನ್ನವರ್‌ನ್ನ ಹತ್ಯೆ ಮಾಡಿದ್ದ ಪತ್ನಿ ಲಕ್ಷ್ಮೀಪ್ರಿಯಕರ ರಮೇಶ್ ಬಡಿಗೇರ ಎಂಬಾತನ ಜೊತೆಗೂಡಿ ಗಂಡನ ಹತ್ಯೆ ಮಾಡಿದ್ದ ಪತ್ನಿ ಲಕ್ಷ್ಮೀ,ಬಳಿಕ ಪಾಂಡಪ್ಪನ ಬೈಕ್ ಮೇಲೆ ಶವ ಹೊತ್ತೊಯ್ದು ಬೀಸಾಕಿದ್ದರು.ಹೊಸೂರು ಫೂಲ್ ಬಳಿ ಶವ ಬಿಸಾಕಿದ್ದ ಆರೋಪಿತರು.ಬಳಿಕ ಬೈಕ್‌ನ್ನು ಹಗ್ಗದಿಂದ ಕಟ್ಟಿ ಪೂಲ್ ಬಳಿ ಬಿಸಾಕಿ ಪರಾರಿಯಾಗಿದ್ದರು.

ತನಗೆ ಏನೂ ಗೊತ್ತೆ ಇಲ್ಲದ ರೀತಿ ಮನೆಗೆ ಹೋಗಿದ್ದ ಪತ್ನಿ ಲಕ್ಷ್ಮೀ.ಮಾರನೇ ದಿನ ಗಂಡ ಮನೆಗೆ ಮರಳಿಲ್ಲ ಎಂದು ನಾಟಕವಾಡಿದ್ದಳು.ಪತ್ನಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.ಪ್ರಕರಣ ಸಂಬಂಧ ರಮೇಶ್ ‌ಬಡಿಗೇರ (36), ಲಕ್ಷ್ಮಿ ಜಟಕನ್ನವರ ಬಂಧಿಸಲಾಗಿದೆ.ಹೊಸೂರ ಗ್ರಾಮದ ರಮೇಶ್ ಬಡಿಗೇರ ಜೊತೆಗೆ ಸಲುಗೆ ಹೊಂದಿದ್ದ ಲಕ್ಷ್ಮಿ ಜಟಕನ್ನವರ ಗಂಡನನ್ನೇ ಮುಗಿಸಿದ್ದಾಳೆ.ಲಕ್ಷ್ಮಿ ವರ್ತನೆ ಪತಿ ಪಾಂಡಪ್ಪ ಜಟಕನ್ನವರ ಆಕ್ರೋಶಕ್ಕೆ ಕಾರಣವಾಗಿತ್ತುಇದೆ ಕಾರಣಕ್ಕಾಗಿ ಪಾಂಡಪ್ಪ-ಲಕ್ಷ್ಮಿ ಮಧ್ಯೆ ಆಗಾಗ ಗಲಾಟೆ ಆಗ್ತಿತ್ತು.

ಮೊನ್ನೆ ರಾತ್ರಿ ‌ಪಾಂಡಪ್ಪ-ಲಕ್ಷ್ಮಿ ಜಗಳವಾಡಿದ್ದು, ಈ ವಿಷಯ ರಮೇಶ್‌ಗೆ ತಿಳಿಸಿದ್ದ ಲಕ್ಷ್ಮಿ ಗಂಡನ ಮರ್ಡರ್ ಗೆ ಸ್ಕೆಚ್ ಹಾಕಿದ್ದಳು‌.ಆಗ ಸ್ಥಳಕ್ಕೆ ಬಂದಿದ್ದ ರಮೇಶ್ ಬಡಿಗೇರ- ಪಾಂಡಪ್ಪ ಮಧ್ಯೆ ಜಗಳ ವಿಕೋಪಕ್ಕೆ ತಿರುಗಿತ್ತು.ಆಗ ಪಾಂಡಪ್ಪನ ತಲೆಗೆ ಕೃಷಿ ‌ಉಪಕರಣದಿಂದ ಹೊಡೆದ ಲಕ್ಷ್ಮಿ ಗಂಡನ ಹತ್ಯೆ ಮಾಡಿದ್ದಳು.ಬಳಿಕ ರಮೇಶ್ ‌ಬಡಿಗೇರನಿಂದಲೂ ವಾರ್ ಆಗಿತ್ತು.

ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ ಪಾಂಡಪ್ಪ ಜಕ್ಕನವರ ಶವವನ್ನು, ಬೈಕ್ ಮೇಲೆ ಶವ ಓಯ್ದು ಕಿರು ಸೇತುವೆ ಬಳಿ ಎಸೆದಿದ್ದ ರಮೇಶ್ ಈಗ ಪೋಲೀಸರ ಬಲೆಗೆ ಬಿದ್ದಿದ್ದಾನೆ.ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ರಮೇಶ್-ಲಕ್ಷ್ಮಿ ಆಲೋಚನೆ ಸಕ್ಸೆಸ್ ಆಗಲಿಲ್ಲ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *