Breaking News
Home / Breaking News / ಬೆಳಗಾವಿಯಲ್ಲಿ ಮಟಕಾ ಜೋರು,ಬುಕ್ಕಿಗೆ ಒಂದು ವರ್ಷ ಗಡಿಪಾರು….!!!

ಬೆಳಗಾವಿಯಲ್ಲಿ ಮಟಕಾ ಜೋರು,ಬುಕ್ಕಿಗೆ ಒಂದು ವರ್ಷ ಗಡಿಪಾರು….!!!

ಬೆಳಗಾವಿ-ಬೆಳಗಾವಿ ನಗರದಲ್ಲಿ ಜೋರ್ದಾರ್ ಮಟಕಾ ದಂಧೆ ನಡೆಸಿದ್ದ,ಮಟಕಾ ಬುಕ್ಕಿಯೊಬ್ಬನನ್ನು ಒಂದು ವರ್ಷದವರೆಗೆ ಬೆಳಗಾವಿಯಿಂದ ಗಡಿಪಾರು ಮಾಡಿ ಡಿಸಿಪಿ ರವೀಂದ್ರ ಗಡಾದೆ ಆದೇಶ ಹೊರಡಿಸಿದ್ದಾರೆ.

ಹಲವಾರು ವರ್ಷಗಳಿಂದ ಮಟಕಾ ದಂಧೆ ನಡೆಸುವ ಚಾಳಿಯನ್ನು ಮುಂದುವರೆಸಿದ್ದ,7 ಮಟಕಾ ಜೂಜಾಟದ ಪ್ರಕರಣಗಳಲ್ಲಿ ಭಾಗಿಯಾಗಿ,ನಾಲ್ಕು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ದೋಷಿಯಾಗಿ ಶಿಕ್ಷೆಗೊಳಪಟ್ಟರೂ ಈತ ಮಟಕಾ ದಂಧೆ ಮುಂದುರೆಸಿದ್ದ,ಬೆಳಗಾವಿಯ ಅನಿಗೋಳದ ನಿವಾಸಿ,ಪರಶುರಾಮ ಬಾಬು ಮೇತ್ರಿ ಎಂಬಾತನನ್ನು ಈಗ ಒಂದು ವರ್ಷ ಗಡಿಪಾರು ಮಾಡಲಾಗಿದೆ.

ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಮಟಕಾ ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಬೆಳಗಾವಿ ಪೋಲೀಸರು ಸಂಕಲ್ಪ ಮಾಡಿದ್ದು,ನಿರಂತರವಾಗಿ ಮಟಕಾ ಜೂಜಾಟದ ದಂಧೆಯನ್ನು ಮುಂದುವರೆಸಿರುವ ಮಟಕಾ ಬುಕ್ಕಿಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಈಗ ಬೆಳಗಾವಿಯಲ್ಲಿ ಮುಂದುವರೆದಿದೆ.

Check Also

ಲಕ್ಷ..ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ರು….!!

ಬೆಳಗಾವಿ : ಖಾತಾ ವರ್ಗಾವಣೆಗೆ ಹಣ ಬೇಡಿಕೆಯಿಟ್ಟಿದ್ದ ತಹಶಿಲ್ದಾರರ ಹಾಗೂ ಕಚೇರಿ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ …

Leave a Reply

Your email address will not be published. Required fields are marked *