ಬೆಳಗಾವಿಯ ಅಟೋ ನಗರದಲ್ಲಿ ವ್ಯಕ್ತಿಯ ಕೊಲೆ

ಬೆಳಗಾವಿ-ಬೆಳಗಾವಿಯ ನಗರದ ಅಟೋ ನಗರದ ಬಳಿ ೩೩ ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ಒಂಬತ್ತು ಘಂಟೆಗೆ ನಡೆದಿದೆ

ಕೊಲೆಯಾದ ವ್ಯಕ್ತಿಯನ್ನು ೩೩ ವರ್ಷದ ವಿಶಾಲ ಭಾತಖಾಂಡೆ ಎಂದು ಗುರುತಿಸಲಾಗಿದೆ ಮಾಳಮಾರುತಿ ಠಾಣೆಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದುಕೊಲೆಗೆ ಕಾರಣ ತಿಳಿದು ಬಂದಿಲ್ಲ

ವಿಶಾಲ ಭಾತಖಾಂಡೆಯ ಹೊಟ್ಟೆಗೆ ಚೂರಿ ಹಾಕಲಾಗಿದೆ ಎಂದು ಹೇಳಲಾಗಿದ್ದು ಪೋಲೀಸರು ಮೃತ ವ್ಯಕ್ತಿಯ ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ ಈ ಘಟನೆಯಿಂದಾಗಿ ಕೆಲ ಕಾಲ ಅಟೋ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *