ಮೋಸ…ಮೋಸ..ಮೋಸ…!!!!
ವಾಯುವ್ಯ ಪದವೀಧರ ಕ್ಷೇತ್ರದಿಂದ ಸಚಿವ ಮುರುಗೇಶ ನಿರಾಣಿ ಸಹೋದರ ಹಣಮಂತ ನಿರಾಣಿ ಸ್ಪರ್ದೆ ಮಾಡಿದ್ದರು.ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಮುರುಗೇಶಣ್ಣಾ ವೀರಮಾತೆ, ಚನ್ನಮ್ಮಾಜಿಯ ಕಿತ್ತೂರು ಕ್ರಾಂತಿಯ ನೆಲ,ಈ ನೆಲದಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ ಮಾಡ್ತೀವಿ,ಅದಕ್ಕಾಗಿಯೇ ಅಲ್ಲಿ ಜಮೀನು ಗುರುತಿಸಲಾಗಿದೆ ಹುಬ್ಬಳ್ಳಿ- ಬೆಳಗಾವಿ ನಡುವೆ ಈ ನಿಲ್ಧಾಣ ಮಾಡಲು ನಾನು ಬದ್ಧ ಎಂದು ಹೇಳಿ,ಬೆಳಗಾವಿ ಜಿಲ್ಲೆಯ ಜನರಲ್ಲಿ ಭರವಸೆಯ ಬೆಳಕು ಮೂಡಿಸಿದ್ದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸಹೋದರ ಹಣಮಂತ ನಿರಾಣಿ ಗೆದ್ದ ಬಳಿಕ ಸಚಿವ ಮುರುಗೇಶ ಈಗ ಉಲ್ಟಾ ಹೊಡೆದಿದ್ದು,ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು- ಶಿರಾ ಮದ್ಯದಲ್ಲಿ ನಿರ್ಮಿಸುತ್ತೇವೆ ಎಂದು ಹೇಳಿ ಬೆಳಗಾವಿ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ.ಕಿತ್ತೂರು ಕ್ರಾಂತಿಯ ನೆಲವನ್ನು ಸಚಿವ ಮುರುಗೇಶ ಅವಮಾನಿಸಿದ್ದಾರೆ.
ತುಮಕೂರು- ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತುಮಕೂರು ಮತ್ತು ಶಿರಾ ಮಧ್ಯದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಚಿಂತನೆಯಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ಕೈಗಾರಿಕಾ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ 10 ವರ್ಷದಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆ ಇದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಚರ್ಚೆ ಹಂತದಲ್ಲಿದೆ.
ತುಮಕೂರು ಮತ್ತು ಶಿರಾ ನಡುವೆ 1 ಸಾವಿರ ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್‌ನ್ನು ಸ್ಥಾಪಿಸಲಾಗುವುದು ಮುರುಗೇಶ್ ನಿರಾಣಿ ಹೊಸ ಆಟ ಶುರು ಮಾಡಿದ್ದಾರೆ.
ಇದಕ್ಕಾಗಿ ಕೇಂದ್ರ ಸರ್ಕಾರ .1 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಹಾಗೆಯೇ ವಿಜಯಪುರ ಮತ್ತು ಕಲಬುರಗಿ ಮಧ್ಯೆ ಟೆಕ್ಸ್‌ಟೈಲ್ ಪಾರ್ಕ್, ಯಾದಗಿರಿ-ರಾಯಚೂರು ಮಧ್ಯೆ ಮೆಘಾ ಡ್ರಗ್ ಪಾರ್ಕ್ ಸ್ಥಾಪಿಸಲಾಗುವುದು. ಇದಕ್ಕೂ ಸಹ ಕೇಂದ್ರ ಸರ್ಕಾರ .1 ಸಾವಿರ ಕೋಟಿ ಅನುದಾನ ನೀಡುತ್ತಿದೆ ಎಂದು ಸಚಿವ ನಿರಾಣಿ ಹೇಳಿದ್ದಾರೆ.