ನದೀಮ ಅವರಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ
ಬೆಳಗಾವಿ ೧೯:ಹಾಸನದ ಮಾಣಿಕ್ಯ ಪ್ರಕಾಶನ ನೀಡುವ ಕಾವ್ಯ ಮಾಣಿಕ್ಯ ರಾಜ್ಯಪ್ರಶಸ್ತಿಗೆ
ಬೆಳಗಾವಿಯ ಯುವ ಕವಿ ನದೀಮ ಸನದಿ ಅವರ ಪ್ರಥಮ ಕೃತಿ ಹುಲಿಯ ನೆತ್ತಿಗೆ ನೆರಳು ಕವನ ಸಂಕಲನ ಆಯ್ಕೆಯಾಗಿದೆ.ನಿನ್ನೆ ರವಿವಾರ ದಿ.೧೮ ರಂದು ಹಾಸನದ ಸಂಸ್ಕೃತ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ನದೀಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನದೀಮ ಸನದಿ ಬಿ.ಇ, ಎಂ.ಟೆಕ್.ಪದವೀಧರರಾಗಿದ್ದು,ಸಧ್ಯ ಬೆಳಗಾವಿ ಸ್ಮಾರ್ಟ್ ಸಿಟಿ ಯಲ್ಲಿ ಸಹಾಯಕ ಸಿವಿಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ಮಾರ್ಟ್ ಸಿಟಿಯ ನಿರ್ದೇಶಕ ರಾದ ಶ್ರೀ ಶಶಿಧರ ಕುರೇರ ನದೀಮ್ ಅವರನ್ನು ಅಭಿನಂದಿಸಿದ್ದಾರೆ.
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …