ಬೆಳಗಾವಿ-ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಾಗರಗಾಳಿ ಗ್ರಾಮಕ್ಕೆ ನುಗ್ಗಿದ ಆನೆಗಳ ಹಿಂಡನ್ನು ಪಟಾಕಿ ಸಿಡಿಸುತ್ತ ಢೋಲು ಬಾರಿಸುತ್ತ ಕಾಡಿಗೆ ನುಗ್ಗಿದ ಿಬ್ಬರು ವನಪಾಲಕರು ನಾಪತ್ತೆಯಾಗಿದ್ದಾರೆ
ಶುಕ್ರವಾರ ಮಧ್ಯಾಹ್ನ ಆನೆಗಳ ಹಿಂಡು ನಾಗರಗಾಳಿ ಗ್ರಾದ ಗದ್ದೆಗೆಗಳಿಗೆ ಲಗ್ಗೆ ಇಟ್ಟಿತ್ತು ಈ ಆನೆಗಳ ಹಿಂಡನ್ನು ಮರಳಿ ಕಾಡಿಗೆ ಓಡಿಸಲು ಗ್ರಾಮಸ್ಥರು ವನಪಾಲಕರ ಸಹಾಯದೊಂದಿಗೆ ಪಟಾಕಿ ಸಿಡಿಸುತ್ತ ಢೋಲು ಬಾರಿಸುತ್ತ ಕಾಡಿಗೆ ನುಗ್ಗಿದರು ಗ್ರಾಮಸಥರು ಅರ್ಧ ದಾರಿಯಿಂದ ಗ್ರಾಮಕ್ಕೆ ವಾಪಸ್ ಆಗಿದ್ದು ಆನೆ ಹಿಂಡನ್ನು ಹಿಂಬಾಲಿಸಿ ಕಾಡಿನೊಳಗೆ ಹೋದ ಿಬ್ಬರು ವನಪಾಲಕರು ಮಾತ್ರ ಇನ್ನುವರೆಗೆ ಮರಳಿ ಬಂದಿಲ್ಲ
ಈ ಘಟನೆಯಿಂದಾಗಿ ನಾಗರಗಾಳಿ ಗ್ರಾಮದಲ್ಲಿ ಆತಂಕ ನಿರ್ಮಾಣವಾಗಿದ್ದು ವಲಯ ಅರಣ್ಯಾಧಿಕಾರಿ ಕುಸನಾಳ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ತಡರಾತ್ರಿ ಹತ್ತು ಘಂಟೆಗೆ ಇಬ್ಬರು ವನ ಪಾಲಕರು ವಾಪಸ್ ಆಗುವ ನೀರಿಕ್ಷೆ ಇದೆ ಎಂದು ತಿಳಿಸಿದ್ದಾರೆ