Breaking News

ಬೆಳಗಾವಿಯಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಜಾಗೆ ರೆಡಿ..ಬೇಗ ಅನುಮತಿ ಕೊಡಿ..!

ಬೆಳಗಾವಿ-ಕೂಸು ಹುಟ್ಟುವ ಮೊದಲು ಕುಲಾಯಿ ಹೊಲಸಿದ ಹಾಗೆ ಬೆಳಗಾವಿ ಮಹಾನಗರ ಪಾಲಿಕೆ ಮಂಜೂರಾಗದ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ನಗರದ ಗೋವಾ ವೇಸ್ ನಲ್ಲಿರುವ ಪಾಲಿಕಯ ವಾಣಿಜ್ಯ ಸಂಕೀರ್ಣದಲ್ಲಿ ಜಾಗೆಯನ್ನು ಗುರುತಿಸಿದ್ದು ಶುಕ್ರವಾರ ಮೇಯರ್ ಸರೀತಾ ಪಾಟೀಲ ಜಾಗೆಯ ಪರಶೀಲನೆ ನಡೆಸಿದರು

ಗೋವಾ ವೇಸ್ ನ ಪಾಲಿಕೆಯ ಕಾಂಪ್ಲೆಕ್ಸನಲ್ಲಿ ಮೂರು ಸಾವಿರ ಸ್ಕ್ವೇರ್ ಫೂಟ್ ಜಾಗೆಯನ್ನು ಮೀಸಲಿಡಲಾಗಿದೆ ಮೇಯರ್ ಸರೀತಾ ಪಾಟೀಲ ಕೆಲವು ತಿಂಗಳ ಹಿಂದೆ  ಬೆಳಗಾವಿಯಲ್ಲಿ    ಪಾಸ್-ಪೋರ್ಟ ಸೇವಾ ಕೇಂದ್ರ ತೆರೆಯಿವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು ಅದಕ್ಕೆ ಸ್ಪಂದಿಸಿದ ಸಚಿವಾಲಯ ಪಾಸ್ ಪೋರ್ಟ ಸೇವಾ ಕೇಂದ್ರವನ್ನು ಬೆಳಗಾವಿಯಲ್ಲಿ ಆರಂಭಿಸುವ ಯೋಜನೆ ಇದೆ ಎಂದು ತಿಳಿಸಿತ್ತು

ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಜಾಗೆ ನೀಡುವ ನಿರ್ಣಯವನ್ನು  ಸಾಮಾನ್ಯ ಸಭೆಯಲ್ಲಿ ಕೈಗೊಂಡು ಪಾಲಿಕೆ ಈಗ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದೆ ಬೆಳಗಾವಿ ಸಂಸದ ಸುರೇಶ ಅಂಗಡಿ ಹಾಗು ರಾಜ್ಯ ಸಭಾ ಸದಸ್ಯ ಪ್ರಭಾಕರ ಕೊರೆ ಅವರು ಮುತವರ್ಜಿ ವಹಿಸಿ ಪಾಸ್ ಪೋರ್ಟ ಸೇವಾ ಕೇಂದ್ರದ ಮಂಜೂರಾತಿಗಾಗಿ ಶ್ರಮಿಸಬೇಕಾಗಿ

ಶುಕ್ರವಾರ ಜಾಗೆಯ ಪರಶೀಲನೆ ನಡೆಸಿರುವ ಮೇಯರ್ ಸರೀತಾ ಪಾಟೀಲ ಬೆಳಗಾವಿ ನಗರದ ಹುತಾತ್ಮ ಚೌಕದ ಅಭಿವೃದ್ಧಿಗೆ ಹತ್ತು ಲಕ್ಷ ರೂ ಅನುದಾನ ನೀಡುವದಾಗಿ ಘೋಷಿಸಿದ್ದಾರೆ

 

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *