ಮುನವಳ್ಳಿ :
ಸಮೀಪದ ಯಕ್ಕೇರಿ ಗ್ರಾಮದ ಜನತಾ ಕಾಲೋನಿಯಲ್ಲಿರುವ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ. 6 ರಿಂದ 10 ರವರೆಗೆ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಜು. 6 ರಂದು ಬೆಳಿಗ್ಗೆ ರುದ್ರಾಭಿಷೇಕ, ಸಂಜೆ 6 ಗಂಟೆಗೆ ಹಾಲು ಎರೆಯುವುದು. ದಿ. 7 ರಂದು ಮುಂಜಾನೆ 10 ಗಂಟೆಗೆ ಸ್ಲೋ ಸೈಕಲ್ ಮೋಟಾರ ಸ್ಪರ್ಧೆ, ಮಧ್ಯಾಹ್ನ 1 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ. ದಿ. 8 ರಂದು ರಾತ್ರಿ 10 ಗಂಟೆಗೆ ಸಾಮಾಜಿಕ ನಾಟಕ ಸೇಡಿಟ್ಟ ಸಿಂಹ ಪ್ರದರ್ಶನ ಜರುಗಲಿದೆ.
ದಿ. 9 ರಂದು ಮುಂಜಾನೆ 2 ಹಲ್ಲಿನ ಟಗರಿನ ಕಾಳಗ, ಮುಂಜಾನೆ 10 ಗಂಟೆಗೆ 4 ಹಲ್ಲಿನ ಟಗರಿನ ಕಾಳಗ. 11 ಗಂಟೆಗೆ ಮುಕ್ತ ಟಗರಿನ ಕಾಳಗ ಜರುಗಲಿದೆ. ದಿ. 10 ರಂದು ಮಧ್ಯಾಹ್ನ 12.00 ಗಂಟೆಗೆ ಕಲ್ಲು ಎತ್ತುವ ಸ್ಪರ್ಧೆ ಜರುಗಲಿದೆ. ಆಸಕ್ತರು ಮೊ. 94804 99157, 99022 28387 ಸಂಪರ್ಕಿಸಲು ಕೋರಲಾಗಿದೆ.
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …