ಬೆಳಗಾವಿ- ರಾಜ್ಯದಲ್ಲಿ ಸರಾಯಿ ನಿಷೇಧ ಮಾಡುವ ನಿಟ್ಟಿನಲ್ಲಿ ಹಲವಾರು ದಶಕಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಹೋರಾಟ ನಡೆಯುತ್ತಿದೆ ಈ ಬಾರಿ ಹಲವಾರು ಸಂಘಟನೆಗಳ ಸಹಕಾರದೊಂದಿಗೆ ಡಿಸಬರ 2 ರಂದು ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಮಹಾ ಆಂದೋಲನ ನಡೆಯಲಿದೆ ಎಂದು ಸಮಾಜ ಸೇವಕ ಶಿವಾಜಿ ಕಾಗಣೆಕರ ತಿಳಿಸಿದ್ದಾರೆ
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ತಮಿಳನಾಡು,ಕೇರಳ ,ಗುಜರಾತ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಸರಾಯಿ ನಿಷೇಧ ಮಾಡಲಾಗಿದೆ ಆದರಂತೆ ಕರ್ನಾಟಕದಲ್ಲಿಯೂ ಸರಾಯಿ ನಿಷೇಧ ಆಗಬೇಕು ಆದಾಯ ಕಡಿಮೆ ಬಂದರೂ ಪರವಾಗಿಲ್ಲ ಸರ್ಕಾರ ಮದ್ಯಪಾನ ನಿಷೇಧ ಮಾಡಬೇಕು ಮದ್ಯಪಾನದಿಂದ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರಿ ಅನೇಕ ಸಂಸಾರಗಳು ಹಾಳಾಗಿವೆ ಇದನ್ನು ತಡೆಯುವ ಹೊಣೆಗಾರಿಕೆ ಸರ್ಕಾರದ ಮೇಲಿದ್ದು ಸರ್ಕಾರದ ಮೇಲೆ ಒತ್ತಡ ತರಲು ಡಿ ಎರಡರಂದು ಬೆಳಗಾವಿಯಲ್ಲಿ ಬೃಹತ್ತ ಆಂದೋಲನ ನಡೆಯಲಿದ್ದು ಸಮಾಜ ಸೇವಕರು ಚಿಂತಕರು ಈ ಆಂದೋಲನದಲ್ಲಿ ಭಾಗವಹಿಸಬೇಕೆಂದು ಕಾಗಣೆಕರ ಮನವಿ ಮಾಡಿಕೊಂಡಿದ್ದಾರೆ
ಸಿದ್ಧರಾಮ ಶ್ರೀಗಳು ಮಾತನಾಡಿ ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಮದ್ಯವೆಸನ ಹೆಚ್ಚಿಸಿ ಆದಾಯ ಹೆಚ್ವಿಸುವ ಟಾರ್ಗೆಟ್ ಅಬಕಾರಿ ಇಲಾಖೆಗೆ ಕೊಡುತ್ತಿರುವದು ದುರ್ದೈವ ಇಂದಿನ ದಿನಗಳಲ್ಲಿ ಶಾಲಾ ಮಕ್ಕಳು ಯುವಕರು ಮದ್ಯವೆಸನಿಗಳಾಗುತ್ತಿದ್ದಾರೆ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯವೆಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಮದ್ಯವೆಸನ ಸಮಾಜದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಬೇಕು ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದರು
ಮದ್ಯವೆಸನದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಮಾವೇಶಗಳು ನಡೆಯಬೇಕು ದೇಶದಲ್ಲಿ ನೋಟ್ ಬ್ಯಾನ್ ಮಾಡಿ ಕ್ರಾಂತಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಮದ್ಯಪಾನ ನಿಷೇಧ ಮಾಡಿ ದೇಶದಲ್ಲಿ ಸಾಮಾಜಿಕ ಕ್ರಾಂತಿ ಮಾಡಬೇಕು ಎಂದು ಶ್ರೀಗಳು ಒತ್ತಾಯ ಮಾಡಿದ್ರು
ಉಡುಪಿಯ ಧರ್ಮ ಸಂಸದನಲ್ಲಿ ಪ್ರತ್ಯೇಕ ಲಿಂಗಾಯತ ವಿಚಾರ ಪ್ರತಿಧ್ವನಿಸಿದೆ. ಲಿಂಗಾಯತ, ವೀರಶೈವ ಹಿಂದು ಧರ್ಮದ ಭಾಗ
ಧರ್ಮ ಸಂಸತ್ತಿನಲ್ಲಿ ಪೇಜಾವರ ಶ್ರೀಗಳ ನೀಡಿದ ಹೇಳಿಕೆಯನ್ನ ಬೆಳಗಾವಿಯಲ್ಲಿ ನಾಗನೂರು ಸಿದ್ದರಾಮ ಸ್ವಾಮೀಜಿ ತಳ್ಳಿಹಾಕಿದ್ದಾರೆ.
ವೀರಶೈವ ಹಿಂದು ಧರ್ಮ ಭಾಗ ಇರಬಹುದು.
ಆದರೇ ಲಿಂಗಾಯತ ಹಿಂದು ಧರ್ಮದ ಭಾಗ ಅಲ್ಲ. ಲಿಂಗಾಯತರು ಹಿಂದು ಧರ್ಮದಿಂದ ದೂರವಾದ್ರೆ ದೇಶಕ್ಕೆ ಯಾವುದೇ ತೊಂದರೆ ಇಲ್ಲ.
ಈ ವಿಚಾರದಲ್ಲಿ ಪೇಜಾವರ ಶ್ರೀಗಳು ಸಂದೇಹ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಜೈನ, ಬೌದ್ಧ, ಸಿಖ ಧರ್ಮ ಹಿಂದು ಧರ್ಮದಿಂದ ಬೇರೆ ಯಾಗಿದ್ದಾರೆ. ಇನ್ನು
ಹಿಂದುಗಳು ಒಂದಾಗಿ ಹೋದರೆ ನಮ್ಮ ಲಿಂಗಾಯತ ಧರ್ಮ ಅಸ್ಮಿತ ದೂರವಾಗುತ್ತದೆ. ಲಿಂಗಾಯತ ಧರ್ಮ ವಿಶಿಷ್ಠ ಧರ್ಮವಾಗಿದ್ದು ಅದಕ್ಕಾಗಿ ಪ್ರತ್ಯೇಕ ಧರ್ಮದ ಮಾನತ್ಯ ಕೇಳುತ್ತಿದ್ದೇವೆ. ಲಿಂಗಾಯತ ಧರ್ಮದಿಂದ ಹಿಂದು ಧರ್ಮಕ್ಕೆ ಯಾವುದೇ ತೊಂದರೆ ಇಲ್ಲ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ದಾರಾಮ ಸ್ವಾಮೀಜಿ ಹೇಳಿದ್ದಾರೆ