ಬೆಳಗಾವಿ- ಖಾನಾಪೂರ ತಾಲೂಕಿನ ನಂದಗಡ ಪರಿಸರದಲ್ಲಿರುವ ನಾಗರಗಾಳಿ ಅಭಯಾರಣ್ಯಕ್ಕೆ ಹೋದ ದಾರವಾಡ ಮೂಲದ ಮೂರು ಜನ ಯುವಕರು ಕಣ್ಮರೆಯಾಗಿದ್ದು ಶೋಧ ಕಾರ್ಯಾಚರಣೆ ಮುಂದುವರೆದಿದೆ
ಅರಣ್ಯ ಇಲಾಖೆಯ ೆಲ್ಲ ವಲಯ ಅಧಕಾರಿಗಳು ಪೋಲಿಸ್ ಅಧಿಕಾರಿಗಳು ಜಂಟಿಯಾಗಿ ಶೋಧ ಕಾರ್ಯಾಚರಣೆ ಮುಂದುರರೆಸಿದ್ದು ಕಣ್ಮರೆಯಾಗಿರುವ ಮೂರು ಜನ ಯುವಕರು ಇನ್ನುವರೆಗೆ ಪತ್ತೆಯಾಗಿಲ್ಲ ಶೋಧ ಕಾರ್ಯಾಚರಣೆ ಅಭಯಾರಣ್ಯದಲ್ಲಿ ನಡೆಯುತ್ತರುವದರಿಂದ ಅಧಿಕಾರಿಗಳ ಮೋಬೈಲ್ ಗಳು ನಾಟ್ ರೀಚೇಬಲ್ ಆಗಿವೆ ಧಾರವಾಡ ಮೂಲದ ಸುಮಾರು ಎಂಟು ಜನ ವಿಧ್ಯಾರ್ಥಿಗಳು ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ನಾಗರಗಾಳಿ ಅಭಯಾರಣ್ಯದಲ್ಲಿ ಚಾರಣಕ್ಕೆ ತೆರಳಿದ್ದರು ಸೋಮವಾರ ಬೆಳಿಗ್ಗೆ ಊದು ಜನ ವಿದ್ಯಾರ್ಥಿಗಳು ಪತ್ತೆಯಾಗಿದ್ದು ಮೂರು ಜನ ಯುವಕರು ಮಾತ್ರ ಇನ್ನುವರೆಗೆ ಕಣ್ಮರೆಯಾಗಿದ್ದಾರೆ
ಜಿಲ್ಲಾ ಅರಣ್ಯ ಅಧಿಕಾರಿಗಳು ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಕಾರಿಗಳು ಶೋಧ ಕಾರ್ಯಾಚರಣೆಯ ನೇತ್ರತ್ವ ವಹಿಸಿದ್ದುಕಣ್ಮರೆಯಾದ ಯುವಕರ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ ನಾಗರಗಾಳಿ ಅಭಯಾರಣ್ಯದಲ್ಲಿ ಕರಡಿ ಹಾಗು ಚಿರತೆಗಳ ಸಂಖ್ಯೆ ಹೆಚ್ಚಾಗಿದೆ ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿರುವ ನಾಗರಗಾಲಿ ಅಭಯಾರಣ್ಯದಲ್ಲಿ ಕಣ್ಮರೆಯಾದ ಯ4ವಕರನ್ನು ಪತ್ತೆ ಮಾಡುವದು ಕಷ್ಟದ ಕೆಲಸವಾಗಿದೆ
ನಾಗರಗಾಳಿ ಅಭಯಾರಣ್ಯದಲ್ಲಿ ಚಿಕ್ಕ ಜಲಪಾತವೊಂದಿದೆ ಈ ಜಲಪಾತದದ ಪ್ರದೇಶದಲ್ಲಿ ಮಜು ಮಾಡಲು ಹೊರಟಿದ್ದ ಯುವಕರು ದಾರಿ ತಪ್ಪಿ ಅರಣ್ಯದಲ್ಲಿಯೇ ಅಲೆದಾಡುತ್ತಿದ್ದಾರೆ ಪೋಲಿಸ್ ಇಲಾಖೆಯ ಶ್ವಾನದಳ ಕಾಡಿನಲ್ಲಿ ನುಗ್ಗಿದ್ದು ಶೋಧ ಕಾರ್ಯಾಚರಣೆ ಮಾತ್ರ ಚುರುಕಾಗಿದೆ
ಮೋಬೈಲ್ ನೆಟವರ್ಕ ಆಧರಿಸಿ ಕಣ್ಮರೆಯಾದ ಯುವಕರನ್ನು ಪತ್ತೇ ಮಾಡುವ ಕೆಲಸ ಮುಂದುವರೆದಿದೆ